
ಕೆಜಿಎಫ್: ವರ್ಗಾವಣೆಯಿಂದ ಆಘಾತಕ್ಕೆ ಒಳಗಾದ ಶಿಕ್ಷಕಿ ಸಾವನ್ನಪ್ಪಿದ್ದಾರೆ. ನಿರ್ಮಲಾಕುಮಾರಿ(54) ಮೃತಪಟ್ಟ ಶಿಕ್ಷಕಿ.
ಕೆಜಿಎಫ್ ನಗರದ ಎನ್‌ಟಿ ಬ್ಲಾಕ್ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದರು. ಬೇರೆ ತಾಲೂಕಿಗೆ ವರ್ಗಾವಣೆಯಾದ ವಿಚಾರ ತಿಳಿದು ಖಿನ್ನತೆಗೆ ಒಳಗಾಗಿ ಮೃತಪಟ್ಟಿದ್ದಾರೆ.
ನಿರ್ಮಲಾ ಕುಮಾರಿ ಅವರನ್ನು ಶ್ರೀನಿವಾಸಪುರ ತಾಲೂಕಿನ ಸೋಮಯಾಜಲಹಳ್ಳಿಗೆ ವರ್ಗಾವಣೆ ಮಾಡಲಾಗಿದ್ದು, ಕೂಡಲೇ ವರದಿ ಮಾಡಿಕೊಳ್ಳುವಂತೆ ಎರಡು ವಾರದ ಹಿಂದೆ ಶಿಕ್ಷಣಾಧಿಕಾರಿ ಕಚೇರಿಯಿಂದ ಕರೆ ಬಂದಿದೆ. ಇದರಿಂದ ಆಘಾತಕ್ಕೆ ಒಳಗಾಗಿದ್ದ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.