ಬೆಂಗಳೂರು: ಶಿಕ್ಷಕರ ವರ್ಗಾವಣೆಗೆ ಅನುಮತಿ ದೊರೆತಿದ್ದು, ಈ ಹಿನ್ನೆಲೆಯಲ್ಲಿ ಶಿಕ್ಷಕರ ಇತ್ತೀಚಿನ ಸೇವಾ ವಿವರಗಳನ್ನು ಪರಿಶೀಲಿಸಿ ಜೂನ್ 3ರ ಒಳಗೆ ಶಿಕ್ಷಕ ಮಿತ್ರ ಅಪ್ಲಿಕೇಶನ್ ನಲ್ಲಿ ಅಪ್ಡೇಟ್ ಮಾಡುವಂತೆ ಶಾಲಾ ಶಿಕ್ಷಣ ಇಲಾಖೆಯ ಪ್ರಭಾರ ಆಯುಕ್ತರಾದ ಬಿ.ಬಿ. ಕಾವೇರಿ ತಿಳಿಸಿದ್ದಾರೆ.
ಪ್ರೌಢಶಾಲೆ ಮುಖ್ಯ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕಚೇರಿ ಮುಖ್ಯಸ್ಥರು ಸೇವಾ ವಿವರಗಳ ಅಪ್ಡೇಟ್ ಮಾಡುವ ಜವಾಬ್ದಾರಿ ಹೊಂದಿರುತ್ತಾರೆ. ನಿಖರವಾದ ಸೇವಾ ವಿವರ ಅಪ್ಡೇಟ್ ಮಾಡದಿದ್ದಲ್ಲಿ ಸಂಬಂಧಿಸಿದ ಬಡಾವಣೆ ಅಧಿಕಾರಿಗಳನ್ನು ಹೊಣೆಯಾಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಶಿಕ್ಷಕರ ಸರಿಯಾದ ಕೆಜಿಐಡಿ ನಂಬರ್ ನಮೂದು, ಶಿಕ್ಷಕರ ಹೆಸರು ಕ್ರಮಬದ್ಧವಾಗಿ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಇದೆಯೇ?, ಶಿಕ್ಷಕರ ಜನ್ಮ ದಿನಾಂಕ, ಸೇವೆಗೆ ಸೇರಿದ ದಿನಾಂಕ, ಪ್ರಸ್ತುತ ವೃಂದಕ್ಕೆ ಸೇರಿದ ದಿನಾಂಕ, ಸೇವಾ ವಿವರದಲ್ಲಿ ಯಾವುದೇ ಕಲಂ ಖಾಲಿ ಇಲ್ಲದಂತೆ ತುಂಬಿರುವುದು, ಅನುದಾನಿತ ಶಿಕ್ಷಕರು, ಶಾಲಾ ಶಿಕ್ಷಕರು ಎಂದು ನಮೂದಾಗಿದೆಯೇ? ಪ್ರಾಥಮಿಕ ಶಾಲಾ, ಪ್ರೌಢಶಾಲೆ ಶಿಕ್ಷಕರೆಂದು ನಮೂದಿಸಲಾಗಿದೆಯೇ ಕಾರ್ಯ ನಿರ್ವಹಿಸುತ್ತಿರುವ ವಲಯಗಳ ಮಾಹಿತಿ ಈಗ ಎಲ್ಲಾ ವಿವರಗಳನ್ನು ಗಮನಿಸುವಂತೆ ತಿಳಿಸಲಾಗಿದೆ.