ಬಳ್ಳಾರಿ: ಪದವೀಧರ ಪ್ರಾಥಮಿಕ ಶಿಕ್ಷಕ(6ರಿಂದ 8ನೇ ತರಗತಿಗಳ) ವೃಂದದ ಹುದ್ದೆಗಳನ್ನು 2021-22ನೇ ಸಾಲಿನಲ್ಲಿ ನೇರ ನೇಮಕಾತಿಯಿಂದ ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಬ್ಲಾಕ್ ಹಂತದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಪ್ರಶಿಕ್ಷಣಾರ್ಥಿಗಳಿಗೆ ಬಳ್ಳಾರಿಯ ಕೋಟೆ ಪ್ರದೇಶದಲ್ಲಿರುವ ಪೂರ್ವವಲಯ ಬಿ.ಆರ್.ಸಿ ಕಚೇರಿಯಲ್ಲಿ ಏ.1 ರಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ನಿರ್ದೇಶನದ ಮೇರೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಏರ್ಪಡಿಸಲಾಗುತ್ತಿದ್ದು, ಈ ತರಬೇತಿಗೆ ಪ್ರಶಿಕ್ಷಣಾರ್ಥಿಗಳು ಬಿ.ಇಡಿ ಮತ್ತು ಡಿ.ಇಡಿ ಅಂಕಪಟ್ಟಿಗಳು ಹಾಗೂ ಟಿ.ಇ.ಟಿ ಅರ್ಹತಾ ಪ್ರಮಾಣ ಪತ್ರದ ಪ್ರತಿಗಳೊಂದಿಗೆ ಬಿ.ಆರ್.ಸಿ ಕಛೇರಿಗೆ(ಪೂರ್ವವಲಯ) ಖುದ್ದಾಗಿ ಹಾಜರಾಗಿ ನೋಂದಣಿ ಮಾಡಿಕೊಂಡು ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು.
ಅರ್ಜಿ ಸಲ್ಲಿಸಬೇಕಾದ ವಿಳಾಸ: ಕ್ಷೇತ್ರ ಸಮನ್ವಯಾಧಿಕಾರಿಗಳು ಬಿ.ಆರ್.ಸಿ ಪೂರ್ವವಲಯ ಕೋಟೆ ಪ್ರದೇಶ ಬಳ್ಳಾರಿ. ಹೆಚ್ಚಿನ ಮಾಹಿತಿಗಾಗಿ ದೂ.9480695066, 8150924231, 9902857731 ಮತ್ತು 9743281023 ಸಂಪರ್ಕಿಸಬಹುದು ಎಂದು ಬಳ್ಳಾರಿ ಪೂರ್ವವಲಯದ ಬಿಇಒ ಅವರು ತಿಳಿಸಿದ್ದಾರೆ.