ಕಲಬುರಗಿ: ಮಗುವಿನೊಂದಿಗೆ ನದಿಗೆ ಹಾರಿ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಂಕರವಾಡಿ ಸಮೀಪ ಕಾಗಿನಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಲಬುರ್ಗಿ ಜಿಲ್ಲೆ ಶಹಾಬಾದ್ ತಾಲೂಕಿನ ಶಂಕರವಾಡಿ ಬಳಿ ಕಾಗಿನಾ ನದಿಗೆ ಹಾರಿ ಭಂಕೂರು ನಿವಾಸಿ ಶಾಂತಾ(24) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನೀನು ನನಗೆ ಚೀಟ್ ಮಾಡಿದ್ದೀಯಾ ಎಂದು ಶಾಂತಾ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿದ್ದಾರೆ. ಸಾಯುವ ಮೊದಲು ಪತಿ ಹೆಸರಲ್ಲಿ ನನ್ನ ಹಾಗೂ ಮಗನ ಲೈಫ್ ಹಾಳು ಮಾಡಿದ್ದೀಯಾ ಎಂದು ಸ್ಟೇಟಸ್ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಹಾಬಾದ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆನ್ನಲಾಗಿದೆ.