ಪ್ರಾಥಮಿಕ ಶಾಲಾ ಶಿಕ್ಷಕರ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದ್ದು, ವಿಷಯವಾರು ವರ್ಗಾವಣೆ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.
ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರು ಎಲ್ಲಾ ವಿಷಯಗಳನ್ನು ಪಾಠ ಮಾಡಬೇಕು. ಆದರೆ, ವರ್ಗಾವಣೆ ವಿಚಾರದಲ್ಲಿ ವಿಷಯ ಪರಿಗಣಿಸಲಾಗುತ್ತಿದೆ. ಇದು ಸಾಮಾನ್ಯ ವರ್ಗಾವಣೆ ಬಯಸಿದ ಶಿಕ್ಷಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ವಿಷಯವಾರು ವರ್ಗಾವಣೆ ನಡೆಯುತ್ತಿರುವುದರಿಂದ ಶಿಕ್ಷಕರು ಬಯಸಿದ ಶಾಲೆಯಲ್ಲಿ ವಿಷಯದ ಹುದ್ದೆ ಖಾಲಿ ಇಲ್ಲದ ಕಾರಣ ವರ್ಗಾವಣೆಗೆ ಸಮಸ್ಯೆ ಎದುರಾಗಿದೆ. ಇದರಿಂದ ಶಾಲೆಗಳಲ್ಲಿ ಖಾಲಿ ಇರುವ ವಿಷಯ ಟೀಚರ್ ಗಳ ಹುದ್ದೆ ಭರ್ತಿ ಆಗದಂತಾಗಿದೆ. ವಿಜ್ಞಾನ, ಗಣಿತ, ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ನಾಲ್ಕು ವಿಷಯವಾರು ವರ್ಗಾವಣೆ ನಡೆಸಲಾಗುತ್ತಿದ್ದು, ರಾಜ್ಯದ 46,000 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1.30 ಲಕ್ಷ ಶಿಕ್ಷಕರಿದ್ದಾರೆ. 30,000 ಹುದ್ದೆಗಳು ಖಾಲಿ ಇದ್ದು, ವಿಷಯವಾರು ವರ್ಗಾವಣೆಯಿಂದ ಕೆಲವು ಶಾಲೆಗಳಲ್ಲಿ ಹುದ್ದೆಗಳ ಅವಶ್ಯಕತೆ ಇದ್ದರೂ ಬೇರೆ ಶಾಲೆಯಲ್ಲಿ ಪಾಠ ಮಾಡುತ್ತಿರುವ ಶಿಕ್ಷಕರನ್ನು ವರ್ಗಾವಣೆ ಮಾಡಲು ಸಬ್ಜೆಕ್ಟ್ ಅಡ್ಡಿಯಾಗಿದೆ.