ಬೆಂಗಳೂರು: ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ನೀಡುತ್ತಿರುವ ವೈದ್ಯಕೀಯ ಧನಸಹಾಯ ಪರಿಷ್ಕರಣೆ ಮಾಡಲಾಗಿದ್ದು, ಏಪ್ರಿಲ್ 1 ರಿಂದ ಹೊಸ ದರ ಜಾರಿಯಾಗಲಿದೆ.
ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಮತ್ತು ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನದ ವತಿಯಿಂದ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ನೀಡುವ ವೈದ್ಯಕೀಯ ದನ ಸಹಾಯ ಪರಿಷ್ಕರಣೆ ಮಾಡಲಾಗಿದೆ.
ಎ ವರ್ಗಕ್ಕೆ 10,000 ದಿಂದ 20,000 ರೂ., ಬಿ ವರ್ಗಕ್ಕೆ 30,00 ರೂ.ನಿಂದ 50,000 ರೂ., ಸಿ ವರ್ಗಕ್ಕೆ 50 ಸಾವಿರ ರೂ.ನಿಂದ 75,000 ರೂ., ಡಿ ವರ್ಗಕ್ಕೆ 1 ಲಕ್ಷ ರೂ.ನಿಂದ 2.50 ಲಕ್ಷ ರೂ.ಗೆ ದರ ಪರಿಷ್ಕರಣೆ ಮಾಡಲಾಗಿದೆ.
2023 ರ ಏಪ್ರಿಲ್ 1 ರ ನಂತರ ಚಿಕಿತ್ಸೆ ಪಡೆಯುವ ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳಿಗೆ ಇದು ಅನ್ವಯವಾಗಲಿದೆ ಎಂದು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.