
ಶಿಕ್ಷಕನೊಬ್ಬ ಎರಡನೇ ತರಗತಿ ವಿದ್ಯಾರ್ಥಿನಿಗೆ ಹೊಡೆದ ಏಟಿಗೆ ಆಕೆಯ ಕಿವಿ, ಮೂಗಿನಿಂದ ರಕ್ತ ಸುರಿದಿರುವ ಘಟನೆ ಬೆಳಕಿಗೆ ಬಂದಿದೆ.
ತೆಲಂಗಾಣದ ಜಗ್ತಿಯಾಲ್ ನ ಶಾಲೆಯೊಂದರ ಶಿಕ್ಷಕ, ಹೋಂ ವರ್ಕ ಮಾಡಿಲ್ಲ ಎಂಬ ಕಾರಣಕ್ಕೆ 2ನೇ ತರಗತಿ ವಿದ್ಯಾರ್ಥಿನಿಗೆ ಮನಬಂದಂತೆ ಹೊಡೆದಿದ್ದಾನೆ. ವಿದ್ಯಾರ್ಥಿನಿಯ ಕಿವಿ, ಮೂಗಿನಿಂದ ರಕ್ತ ಸುರಿದಿದ್ದು, ಪಠ್ಯ, ಪುಸ್ತಕದ ತುಂಬೆಲ್ಲ ರಕ್ತ ಬಿದ್ದಿದೆ.
ಶಿಕ್ಷಕನ ಹೊಡೆತಕ್ಕೆ ತನ್ನ ಮೂಗು, ಕಿವಿಯಿಂದ ರಕ್ತ ಸುರಿದು ನೋಟ್ ಬುಕ್, ಪುಸ್ತಕವೆಲ್ಲ ರಕ್ತಮಯವಾಗಿದೆ ಎಂದು ಬಾಲಕಿ ತೋರಿಸುತ್ತಿದ್ದ ವಿಡಿಯೋ ವೈರಲ್ ಆಗಿದ್ದು, ಶಿಕ್ಷಕನ ಅಮಾನುಷ ಕೃತ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ. ಮನುಷತ್ವವೂ ಇಲ್ಲದೇ ಮನಬಂದಂತೆ ಹೊಡೆದ ಶಿಕ್ಷಕನಿಗೆ ಕಠಿಣ ಶಿಕ್ಷೆಯಗಬೇಕು ಎಂದು ಜನರು ಆಗ್ರಹಿಸಿದ್ದಾರೆ.