ಬೆಂಗಳೂರು: ಶಿಕ್ಷಕಿಯರಿಗೆ ಮನೆಯಿಂದಲೇ ಕೆಲಸ ನಿರ್ವಹಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಅವಕಾಶ ನೀಡಿದೆ. ಸಂಚಾರಕ್ಕೆ ಅನಾನುಕೂಲತೆ ಇರುವ ಶಿಕ್ಷಕರು ಮನೆಯಿಂದಲೇ ಕೆಲಸ ನಿರ್ವಹಿಸಬಹುದು.
ಕೊರೋನಾ ನಿರ್ಬಂಧಿತ ಕಾರಣ ಅಂತರಜಿಲ್ಲಾ ಶಿಕ್ಷಕರಿಗೆ ಶಾಲೆಗಳ ಹಾಜರಾತಿಗೆ ಕಾಲಾವಕಾಶ ನೀಡಲಾಗಿದೆ. ಅದೇ ರೀತಿ ಸಂಚಾರಕ್ಕೆ ಅನಾನುಕೂಲತೆ ಇರುವ ಶಿಕ್ಷಕಿಯರಿಗೆ ವಿನಾಯಿತಿ ನೀಡಲಾಗಿದೆ.
ಏಕೋಪಾಧ್ಯಾಯ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕಿಯರನ್ನು ಹೊರತುಪಡಿಸಿ ಸಂಚಾರಕ್ಕೆ ಅನುಕೂಲತೆ ಇಲ್ಲದ ಶಿಕ್ಷಕಿಯರು ಜೂನ್ 21 ರವರೆಗೆ ಮನೆಯಿಂದಲೇ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಲಾಕ್ಡೌನ್ ನಿರ್ಬಂಧ ತೆರವುಗೊಂಡ ಜಿಲ್ಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಬೇಕೆಂದು ತಿಳಿಸಲಾಗಿದೆ.