ಬೆಂಗಳೂರು: ಖಾಸಗಿ ಶಾಲೆಗಳು ಮತ್ತು ಪೋಷಕರ ನಡುವೆ ಶುಲ್ಕ ವಿಚಾರವಾಗಿ ಚರ್ಚೆ ನಡೆಯುತ್ತಿದ್ದು, ಸರ್ಕಾರ ಶೇಕಡ 25 ರಿಂದ 30 ರಷ್ಟು ಶುಲ್ಕ ಕಡಿತ ಮಾಡಲು ಚಿಂತನೆ ನಡೆಸಿದೆ. ಆದರೆ, ಶುಲ್ಕ ಕಡಿತ ಮಾಡುವ ಸರ್ಕಾರದ ನಿರ್ಧಾರಕ್ಕೆ ಖಾಸಗಿ ಶಾಲೆಗಳಿಂದ ವಿರೋಧ ವ್ಯಕ್ತವಾಗಿದೆ ಎನ್ನಲಾಗಿದೆ.
ಏಕರೂಪದಲ್ಲಿ ಶುಲ್ಕ ಕಡಿತ ಮಾಡಿದಲ್ಲಿ ಶಿಕ್ಷಕರ ವೇತನ ಕಡಿತಗೊಳಿಸುವ ಬಗ್ಗೆ ಖಾಸಗಿ ಶಾಲೆ ಆಡಳಿತ ಆಡಳಿತ ಮಂಡಳಿಗಳು ಸರ್ಕಾರಕ್ಕೆ ತಿಳಿಸಿವೆ ಎಂದು ಹೇಳಲಾಗಿದೆ.
ಒಂದು ವೇಳೆ ಸರ್ಕಾರ ಏಕರೂಪದಲ್ಲಿ ಶುಲ್ಕ ಕಡಿತ ಮಾಡಿದರೆ ಅನಿವಾರ್ಯವಾಗಿ ಶಿಕ್ಷಕರ ವೇತನ ಕಡಿತ ಮಾಡಲಾಗುವುದು ಎಂದು ಶಿಕ್ಷಕರಿಗೆ ಖಾಸಗಿ ಶಾಲೆಗಳ ಆಡಳಿತ ಮಂಡಳಿ ವತಿಯಿಂದ ಈಗಾಗಲೇ ಮಾಹಿತಿ ನೀಡಲಾಗಿದೆ.
ಕೊರೋನಾ ಕಾರಣದಿಂದ ಸಂಕಷ್ಟದಲ್ಲಿರುವ ಖಾಸಗಿ ಶಾಲೆ ಆಡಳಿತ ಮಂಡಳಿಗಳು, ಶಿಕ್ಷಕರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ. ಕೆಲವು ಶಾಲೆಗಳಲ್ಲಿ ಅಲ್ಪಸ್ವಲ್ಪ ವೇತನ ನೀಡಲಾಗುತ್ತಿದೆ. ಮತ್ತೆ ಕೆಲವು ಶಾಲೆ ಶಿಕ್ಷಕರಿಗೆ ವೇತನ ನೀಡಿಲ್ಲ. ಈಗಾಗಲೇ ಶಾಲಾ ಶುಲ್ಕವನ್ನು ಕಡಿತ ಮಾಡಿದ್ದು, ಒಂದು ವೇಳೆ ಏಕರೂಪವಾಗಿ ಶುಲ್ಕ ಕಡಿತ ಮಾಡಿದರೆ ಶಿಕ್ಷಕರ ವೇತನವನ್ನು ಕಡಿತಗೊಳಿಸುವ ಬಗ್ಗೆ ಶಾಲಾ ಆಡಳಿತ ಮಂಡಳಿಯವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.