ಬೆಂಗಳೂರು: ರಾಜ್ಯದ ಖಾಸಗಿ ಅನುದಾನಿತ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿನ 257 ಶಿಕ್ಷಕರು, 173 ಉಪನ್ಯಾಸಕರ ನೇಮಕಾತಿಗೆ ಸರ್ಕಾರ ಅನುಮೋದನೆ ನೀಡಿದೆ.
ನಿವೃತ್ತಿ, ನಿಧನ, ರಾಜೀನಾಮೆ ಮೊದಲಾದ ಕಾರಣಗಳಿಂದ 2015 ರ ಡಿಸೆಂಬರ್ 31ರೊಳಗೆ ಖಾಲಿಯಾದ 430 ಬೋಧಕ ಹುದ್ದೆಗಳ ನೇಮಕಾತಿಗೆ ಸರ್ಕಾರ ಅನುಮೋದನೆ ನೀಡಿದೆ.
ಈ ಹಿಂದೆಯೇ ಈ ಹುದ್ದೆಗಳ ನೇಮಕಾತಿಗೆ ಸರ್ಕಾರ ಅನುಮೋದನೆ ನೀಡಿದ್ದರೂ, ಕೊರೋನಾ ಕಾರಣದಿಂದಾಗಿ ಆರ್ಥಿಕ ಇಲಾಖೆ ಆಕ್ಷೇಪದ ಕಾರಣ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಈಗ ಇಲಾಖೆಯ ಹಂತದಲ್ಲಿ ಬಾಕಿ ಇರುವ 257 ಶಿಕ್ಷಕರು ಮತ್ತು 173 ಉಪನ್ಯಾಸಕರ ನೇಮಕಾತಿಗೆ ಅನುಮೋದನೆ ನೀಡಲಾಗಿದೆ ಎಂದು ಹೇಳಲಾಗಿದೆ.