ಬೆಂಗಳೂರು: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಹೊಸದಾಗಿ ಆಯ್ಕೆಯಾದ ಪದವೀಧರ ಶಿಕ್ಷಕರಿಗೆ ಸಿ ವಲಯದಲ್ಲಿ ಹುದ್ದೆ ಖಾಲಿ ಇಲ್ಲದಿದ್ದರೆ ಅವರು ಆಯ್ಕೆ ಮಾಡಿಕೊಂಡ ಜಿಲ್ಲಾ ವ್ಯಾಪ್ತಿಯ ಶಾಲೆಗೆ ಆದ್ಯತೆ ನೀಡಿ ಸ್ಥಳ ನಿಯುಕ್ತಿಗೆ ಶಾಲಾ ಶಿಕ್ಷಣ ಸೂಚನೆ ನೀಡಿದೆ.
ಇಲಾಖೆಯ ಆಯುಕ್ತರಾದ ಬಿ.ಬಿ. ಕಾವೇರಿ ಅವರು ಈ ಬಗ್ಗೆ ಉಪನ್ ನಿರ್ದೇಶಕರಿಗೆ(ಆಡಳಿತ) ಪತ್ರ ಬರೆದಿದ್ದು, ಬಹು ಮಾಧ್ಯಮ, ದ್ವಿಭಾಷ ಮಾಧ್ಯಮ ಮತ್ತು ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಶಿಕ್ಷಕರನ್ನು ನಿಯೋಜನೆ ಮಾಡಬೇಕು. ಈ ಸ್ಥಳ ನಿಯುಕ್ತಿ ತಾತ್ಕಾಲಿಕವಾಗಿದ್ದು, ಸಿ ವಲಯದಲ್ಲಿ ಖಾಲಿ ಹುದ್ದೆ ಸೃಷ್ಟಿಯಾಗುವವರೆಗೆ ಮಾತ್ರ ಅನ್ವಯವಾಗುತ್ತದೆ ಎಂದು ತಿಳಿಸಿದ್ದಾರೆ.
ಹೊಸದಾಗಿ ನೇಮಕವಾದ ಶಿಕ್ಷಕರ ಪಾಠ ಬೋಧನೆಯ ಕಾರ್ಯವೈಖರಿಯ ಬಗ್ಗೆ ಬಿಇಒಗಳು ನಿಗಾ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.