ಬೆಂಗಳೂರು: 15,000 ಶಿಕ್ಷಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಹುದ್ದೆಗಳ ಭರ್ತಿ ನಂತರ ಖಾಲಿ ಉಳಿಯುವ ಹುದ್ದೆಗಳಿಗೆ ಫೆಬ್ರವರಿಯಲ್ಲಿ ಮತ್ತೊಮ್ಮೆ ಸಿಇಟಿ ನಡೆಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಇದರಿಂದ ಶಿಕ್ಷಕರಾಗ ಬಯಸುವವರಿಗೆ ಮತ್ತೊಂದು ಅವಕಾಶ ಸಿಗಲಿದೆ.
ಈಗ 15,000 ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ನಡೆದಿದ್ದು, ಇನ್ನೂ ಮೂರು ಸಾವಿರ ಹುದ್ದೆಗಳು ಖಾಲಿ ಉಳಿಯುವ ಸಾಧ್ಯತೆ ಇದೆ. ಈ ಖಾಲಿ ಹುದ್ದೆಗಳ ನೇಮಕಾತಿಗೆ ಪುನಹ ಸಿಇಟಿ ನಡೆಸಲಾಗುವುದು.
15 ಸಾವಿರ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ನಡೆದ ಸಿಇಟಿಯಲ್ಲಿ 54,342 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದು ವಿಷಯವಾರು, ಜಿಲ್ಲಾವಾರು, ಮೀಸಲಾತಿವಾರು ವಿಂಗಡಣೆ ಮಾಡಿದ ನಂತರ 3000 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಇಲ್ಲದಂತಾಗಿದೆ. ಶಿಕ್ಷಣ ಇಲಾಖೆ ಖಾಲಿಯಾದ ಹುದ್ದೆಗಳ ಮಾಹಿತಿಯನ್ನು ಕ್ರೋಢೀಕರಿಸುತ್ತಿದೆ. ಸುಮಾರು 3000 ಹುದ್ದೆಗಳು ಖಾಲಿ ಉಳಿಯಲಿವೆ, ಈ ಹುದ್ದೆಗಳಿಗೆ ಫೆಬ್ರವರಿಯಲ್ಲಿ ಪುನಹ ಸಿಇಟಿ ನಡೆಸಲಾಗುವುದು ಎಂದು ಹೇಳಲಾಗಿದೆ.