
ಅಹಮದಾಬಾದ್: ಶಿಕ್ಷಕನೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ಗುಜರಾತ್ ನ ಸಬರ್ಕಾಂತ್ ಜಿಲ್ಲೆಯಲ್ಲಿ ನಡೆದಿದೆ.
10ನೇ ತರಗತಿ ವಿದ್ಯಾರ್ಥಿನಿ ಮೇಲೆ ಕಾಮುಕ ಶಿಕ್ಷಕ ಅಟ್ಟಹಾಸ ಮೆರೆದಿದ್ದಾನೆ. ವಿದ್ಯಾರ್ಥಿನಿ ಓದಿನಲ್ಲಿ ಬಹಳ ಬುದ್ಧಿವಂತೆಯಾಗಿದ್ದಳು. ಕ್ರೀಡೆ, ಭಾಷಣ ಸ್ಪರ್ಧೆ ಹೀಗೆ ಎಲ್ಲದರಲ್ಲಿಯೂ ಮುಂದಿದ್ದಳು. ಅದರಲ್ಲಿಯೂ ವಿಶೇಷವಾಗಿ, ‘ಬೇಟಿ ಬಚಾವೋ, ಬೇಟಿ ಪಡಾವೋ’ ಯೋಜನೆಯ ಬಗ್ಗೆ ಶಾಲೆಯಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದಳು. ವಿದ್ಯಾರ್ಥಿಯ ಭಾಷಣವನ್ನು ಎಲ್ಲರೂ ಮೆಚ್ಚಿದ್ದರು.
ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ಬಗ್ಗೆ ಭಾಷಣ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದ ಅದೇ ವಿದ್ಯಾರ್ಥಿನಿಯ ಮೇಲೆ ಕೆಲವೇ ದಿನಗಳಲ್ಲಿ ಶಿಕ್ಷಕನೇ ಅತ್ಯಾಚಾರವೆಸಗಿದ್ದಾನೆ. ಫೆ.7ರಂದು ಬಾಲಕಿಯ ಹುಟ್ಟುಹಬ್ಬದ ದಿನದಂದು ಆಕೆಯನ್ನು ಹೋಟೆಲ್ ಗೆ ಕರೆದೊಯ್ದಿದ್ದ ಶಿಕ್ಷಕ, ಹೋಟೆಲ್ ನಲ್ಲಿಯೇ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ.
ಸಂತ್ರಸ್ತೆ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದರೆ. ಅತ್ಯಾಚಾರದ ಬಳಿಕ ಶಿಕ್ಷಕ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದು, ಪರೀಕ್ಷೆಗಳಲ್ಲಿ ಉತ್ತೀರ್ಣನಾಗಲು ಬಿಡಲ್ಲ ಎಂದು ಧಮ್ಕಿ ಹಾಕಿದ್ದಾನಂತೆ ಈ ಬಗ್ಗೆ ವಿದ್ಯಾರ್ಥಿನಿ ದೂರು ದಾಖಲಿಸಿದ್ದಾಳೆ.