ಕೊಪ್ಪಳ: ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ವಿಕೃತ ಕಾಮುಕ ಶಿಕ್ಷಕನೊಬ್ಬನ ಕರ್ಮಕಾಂಡ ಬಯಲಾಗಿದೆ. ಮಗುವಿನ ಗುಪ್ತಾಂಗದೊಂದಿಗೆ ಶಿಕ್ಷಕ ಚೆಲ್ಲಾಟವಾಡಿದ್ದಾನೆ. ರಾಯಚೂರು ಜಿಲ್ಲೆಯ ಸಿಂಗಾಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕ ಇಂತಹ ಕೃತ್ಯವೆಸಗಿದ್ದಾನೆ.
ಶಾಲೆಯಲ್ಲಿ ಮಗುವಿನ ತಲೆಯ ಮೇಲೆ ಗ್ಲಾಸ್ ಇಟ್ಟು, ಎರಡು ಕೈಗಳನ್ನು ಮೇಲೆ ಎತ್ತುವಂತೆ ತಿಳಿಸಿದ್ದಾನೆ. ಈ ವೇಳೆ ಬೇರೆ ಮಕ್ಕಳಿಂದ ಚಡ್ಡಿ ತೆಗೆಸಿ ಕೋಲಿನಿಂದ ಗುಪ್ತಾಂಗಕ್ಕೆ ತಿವಿದು ವಿಕೃತಿ ಮೆರೆದಿದ್ದಾನೆ. ಈ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿವೆ. ಅಲ್ಲದೆ, ಈತ ಬೇರೆ ಮಹಿಳೆಯರೊಂದಿಗೆ ಕಾಮದಾಟ ನಡೆಸಿದ್ದು, ಇತ್ತೀಚೆಗೆ ಕಳೆದು ಹೋಗಿದ್ದ ಮೊಬೈಲ್ ಯಾರಿಗೋ ದೊರೆತು ಅದರಲ್ಲಿದ್ದ ಮೆಮೊರಿ ಕಾರ್ಡ್ ತೆಗೆದಾಗ ಶಿಕ್ಷಕನ ಕರ್ಮಕಾಂಡ ಬಯಲಾಗಿದೆ ಎಂದು ಹೇಳಲಾಗಿದೆ.