ಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರ ಪದೋನ್ನತಿಯನ್ನು ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ ರದ್ದುಪಡಿಸಿದೆ. ಪದವೀಧರ ಶಿಕ್ಷಕರಿಗೆ ಮಾತ್ರ ಪ್ರೌಢಶಾಲೆಗೆ ಬಡ್ತಿ ನೀಡಬಹುದು ಎಂದು ಹೇಳಲಾಗಿದೆ.
ಒಂದರಿಂದ ಐದನೇ ತರಗತಿಗೆ ಪಾಠ ಮಾಡುವ ಶಿಕ್ಷಕರು ಪ್ರೌಢ ಶಾಲಾ ಸಹ ಶಿಕ್ಷಕರ ಗ್ರೇಡ್-2 ಹುದ್ದೆಗೆ ಅರ್ಹರಲ್ಲ. ಈ ಹುದ್ದೆಗೆ 6 ರಿಂದ 8 ನೇ ತರಗತಿಗೆ ಪಾಠ ಮಾಡುವ ಪದವೀಧರ ಶಿಕ್ಷಕರಿಗೆ ಮಾತ್ರ ಬಡ್ತಿ ನೀಡಬಹುದು ಎಂದು ಹೇಳಲಾಗಿದೆ.
ಒಂದರಿಂದ ಐದನೇ ತರಗತಿಗೆ ಪಾಠ ಮಾಡುವ ಶಿಕ್ಷಕರು ಹೈಸ್ಕೂಲ್ ಗೆ ಬಡ್ತಿ ಪಡೆದಿದ್ದಲ್ಲಿ ಕೂಡಲೇ ಹಿಂಬಡ್ತಿ ನೀಡಬೇಕು ಎಂದು ನ್ಯಾಯಮಂಡಳಿ ತಿಳಿಸಿದ್ದು, ಈ ಆದೇಶಕ್ಕೆ ತಡೆಯಾಜ್ಞೆ ಕೋರಿ ಶಿಕ್ಷಣ ಇಲಾಖೆಯಿಂದ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿದೆ.
2016 -17 ನೇ ಸಾಲಿನಿಂದ ಒಂದರಿಂದ ಐದನೇ ತರಗತಿಗೆ ಪಾಠ ಮಾಡುವ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಯಿಂದ ಪ್ರೌಢಶಾಲೆ ಸಹ ಶಿಕ್ಷಕರ ಹುದ್ದೆಗೆ ನೀಡಲಾಗಿರುವ ಎಲ್ಲಾ ಪದೋನ್ನತಿ ರದ್ದು ಮಾಡಬೇಕು. ಕೂಡಲೇ ಹಿಂಬಡ್ತಿ ನೀಡಬೇಕು ಎಂದು ಹೇಳಲಾಗಿದೆ.