
ಹಾವೇರಿ: ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ, ಸಹ ಶಿಕ್ಷಕಿಗೆ ಅದೇ ಶಾಲೆಯ ಶಿಕ್ಷಕ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ.
ಬಮ್ಮನಹಳ್ಳಿಯ ಪ್ರೌಢಶಾಲೆ ಶಿಕ್ಷಕನ ವಿರುದ್ಧ ಈ ಆರೋಪ ಕೇಳಿ ಬಂದಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಸಮಾಜ ವಿಜ್ಞಾನ ಶಿಕ್ಷಕನ ವಿರುದ್ಧ ಮುಖ್ಯ ಶಿಕ್ಷಕಿ, ಸಹಶಿಕ್ಷಕಿ ಆರೋಪ ಮಾಡಿದ್ದಾರೆ. ಶಿಕ್ಷಕನ ಕೃತ್ಯದಿಂದ ಬೇಸತ್ತು ಕಣ್ಣೀರು ಹಾಕಿದ್ದಾರೆ.
ಶಾಲೆಗೆ ಡಿಡಿಪಿಐ ಜಗದೀಶ್ವರ್ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಮುಖ್ಯ ಶಿಕ್ಷಕಿ ಮತ್ತು ಸಹ ಶಿಕ್ಷಕಿಯ ಆರೋಪವನ್ನು ಸಹ ಶಿಕ್ಷಕ ಅಲ್ಲಗಳೆದಿದ್ದಾರೆ. ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.