
ಬೆಂಗಳೂರು: ಬಾಡಿಗೆ ಮನೆ ಮಾಲೀಕನಿಂದ ಶಿಕ್ಷಕಿಗೆ ಕಿರುಕುಳ ಆರೋಪ ಕೇಳಿಬಂದಿದೆ. ನೊಂದ ಶಿಕ್ಷಕಿ ಪೊಲೀಸರಿಗೆ ದೂರು ನೀಡಿದ್ದಾರೆ.
ಶ್ರೀನಗರದ ಬಾಡಿಗೆ ಮನೆಯಲ್ಲಿರುವ ಶಿಕ್ಷಕಿ ಈ ರೀತಿ ಆರೋಪ ಮಾಡಿದ್ದಾರೆ. ಮನೆಯ ಡೋರ್ ಲಾಕ್ ಮಾಡಿ ಮಾಲೀಕ ಪದ್ಮನಾಭ್ ಕಿರುಕುಳ ನೀಡಿದ ಆರೋಪ ಮಾಡಿದ್ದು, ಹನುಮಂತನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಪದ್ಮನಾಭನ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.