![](https://kannadadunia.com/wp-content/uploads/2023/04/25-7-1024x576.jpg)
ಟ್ವಿಟರ್ ನಲ್ಲಿ ಈ ವಿಡಿಯೋ ಹಂಚಿಕೊಂಡಿರುವ ಸಾಮಾಜಿಕ ಜಾಲತಾಣ ಬಳಕೆದಾರರಾದ ಅರುಣೇಶ್ ಯಾದವ್ ಅವರು “ಅತ್ಯಾಚಾರಿಗಳಿಗೆ ಮುಕ್ತ ಹಸ್ತ ನೀಡಿರುವುದು ನಮ್ಮ ರಾಜ್ಯದ ದುರದೃಷ್ಟಕರ ಘಟನೆ. ಸರ್ಕಾರಿ ಕೈಗಾರಿಕಾ ಸಂಸ್ಥೆಯ ಐಟಿಐ ಕಾಲೇಜಿನ ಈ ವೀಡಿಯೊ ವೈರಲ್ ಆಗುತ್ತಿದೆ. ಶಿಕ್ಷಕರೊಬ್ಬರು ಬಲವಂತವಾಗಿ ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದಾರೆ” ಎಂದು ವಿಡಿಯೋವನ್ನ ಉತ್ತರಪ್ರದೇಶ ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದರು.
ಪೋಸ್ಟ್ ಹಂಚಿಕೊಂಡಿರುವ ಡಾ. ಅರುಣೇಶ್ ಕುಮಾರ್ ಯಾದವ್ ಅವರು ತಮ್ಮನ್ನು ಭೌತಶಾಸ್ತ್ರದ ಪ್ರಾಧ್ಯಾಪಕ, ಸಾಮಾಜಿಕ ಕಾರ್ಯಕರ್ತ ಮತ್ತು ಕಿಸಾನ್ ನಾಯಕ ಎಂದು ಹೇಳಿಕೊಂಡಿದ್ದಾರೆ.
ವಿಡಿಯೋ ನೋಡಿದ ತಕ್ಷಣವೇ ಉತ್ತರ ಪ್ರದೇಶದ ಪೊಲೀಸರು ಆರೋಪಿತ ಶಿಕ್ಷಕನನ್ನ ಬಂಧಿಸಿದ್ದಾರೆ. ಬಂಧಿತ ಶಿಕ್ಷಕನ ವಿಡಿಯೋ ಹಂಚಿಕೊಂಡಿರುವ ಪೊಲೀಸರು ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಶಿಕ್ಷಕನ ಹೆಸರು ವಿಜಯ್ ಸಿಂಗ್. ಅವರು ಕತ್ರಾದ ಐಟಿಐ ಕಾಲೇಜಿನಲ್ಲಿ ಶಿಕ್ಷಕರಾಗಿದ್ದಾರೆ. ದೂರು ಸ್ವೀಕರಿಸಿದ 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಮಿರ್ಜಾಪುರದ ಎಸ್ಪಿ ಸಂತೋಷ್ ಮಿಶ್ರಾ ಹೇಳಿದ್ದಾರೆ. ಹೋಳಿ ಹಬ್ಬ ಆಚರಣೆ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
https://twitter.com/YadavArunesh/status/1651442165753733120?ref_src=twsrc%5Etfw%7Ctwcamp%5Etweetembed%7Ctwterm%5E1651442165753733120%7Ctwgr%5Ed245c4edb958b83b56518edcd28525db53140b3c%7Ctwcon%5Es1_&ref_url=https%3A%2F%2Fwww.freepressjournal.in%2Feducation%2Fviral-video-teacher-forcefully-molests-girl-student-in-mirzapur-college-cops-respond-quickly
https://twitter.com/YadavArunesh/status/1651442165753733120?ref_src=twsrc%5Etfw%7Ctwcamp%5Etweetembed%7Ctwterm%5E1651564757277884416%7Ctwgr%5Ed245c4edb958b83b56518edcd28525db53140b3c%7Ctwcon%5Es2_&ref_url=https%3A%2F%2Fwww.freepressjournal.in%2Feducation%2Fviral-video-teacher-forcefully-molests-girl-student-in-mirzapur-college-cops-respond-quickly