ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಳೆದ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಪದವೀಧರ ಶಿಕ್ಷಕರಿಗೆ ಹಿಂಬಡ್ತಿಯಾಗಿದೆ. ಪದವೀಧರ ಶಿಕ್ಷಕರನ್ನು ಪ್ರಾಥಮಿಕ ಶಾಲೆ ಶಿಕ್ಷಕರೆಂದು ಪದನಾಮ ಬದಲಿಸಿದ ಕಾರಣದಿಂದ 80 ಸಾವಿರಕ್ಕೂ ಅಧಿಕ ಶಿಕ್ಷಕರಿಗೆ ಅನ್ಯಾಯವಾಗಿದೆ ಎಂದು ಹೇಳಲಾಗಿದೆ.
2016 ಕ್ಕೆ ಮೊದಲು ನೇಮಕಾತಿಗೊಂಡ ಒಂದರಿಂದ ಏಳನೇ ತರಗತಿ ಪಾಠ ಮಾಡುವ ಪ್ರಾಥಮಿಕ ಶಾಲೆ ಶಿಕ್ಷಕರುಗಳಲ್ಲಿ ಮೂಲ ವೃಂದದ 1.60 ಲಕ್ಷ ಶಿಕ್ಷಕರಲ್ಲಿ 80 ಸಾವಿರಕ್ಕೂ ಅಧಿಕ ಶಿಕ್ಷಕರು ಪದವಿ ವಿದ್ಯಾರ್ಹತೆ ಮತ್ತು 20 ರಿಂದ 25 ವರ್ಷ ಸೇವಾನುಭವ ಹೊಂದಿದ್ದಾರೆ.
ಸೇವಾನಿರತರಾದ ಪ್ರಾಥಮಿಕ ಶಾಲೆ ಶಿಕ್ಷಕರನ್ನು ಮುಂಬಡ್ತಿಗೊಳಿಸದೆ ಒಂದರಿಂದ ಐದನೇ ತರಗತಿ ಪಾಠ ಮಾಡುವ ಪ್ರಾಥಮಿಕ ಪಾಠಶಾಲೆ ಶಿಕ್ಷಕರ ವೃಂದಕ್ಕೆ ವರ್ಗೀಕರಿಸಿದ ಕಾರಣ ಹಿಂಬಡ್ತಿ ನೀಡಿದಂತಾಗಿದೆ. 2016 ಕ್ಕಿಂತ ಪೂರ್ವಾನ್ವಯವಾಗುವಂತೆ ಜೇಷ್ಠತೆಯೊಂದಿಗೆ ಮುಂಬಡ್ತಿ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ. ಸೇವಾ ಅನುಭವದ ಜೊತೆಗೆ ಉನ್ನತ ಶಿಕ್ಷಣ ಪಡೆದ ಶಿಕ್ಷಕರಿಗೆ ಮುಂಬಡ್ತಿ ನೀಡಬೇಕೆಂದು ಹೇಳಲಾಗಿದೆ.