ಬೆಂಗಳೂರು: ರಾಜ್ಯದಲ್ಲಿ ಶಾಲೆ ಶುರುವಾಗಿ ಎರಡು ದಿನದಲ್ಲಿ 16 ಶಿಕ್ಷಕರಿಗೆ ಕೊರೋನಾ ಸೋಂಕು ತಗುಲಿದೆ. ಶುಕ್ರವಾರದಿಂದ ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಿದ್ದು, ಶಾಲೆಗಳಲ್ಲಿ ವಿದ್ಯಾಗಮ ಕಲಿಕೆ ಶುರುವಾಗಿದೆ.
ಮಕ್ಕಳು ಕೂಡ ಶಾಲೆಗೆ ಉತ್ಸಾಹದಿಂದ ಆಗಮಿಸತೊಡಗಿದ್ದಾರೆ. ಸೋಮವಾರದಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಲಿದೆ. ಆದರೆ, ರಾಜ್ಯದಲ್ಲಿ ಶನಿವಾರ 14 ಶಿಕ್ಷಕರಿಗೆ ಕೊರೋನಾ ಸೋಂಕು ತಗುಲಿರುವುದು ಆತಂಕ ಮೂಡಿಸಿದೆ.
ಮೊದಲ ದಿನ ಇಬ್ಬರಿಗೆ ಸೋಂಕು ಪತ್ತೆಯಾಗಿತ್ತು. ಶಾಲೆಗೆ ಬರುವ ಶಿಕ್ಷಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಾಗಿದ್ದು ಪರೀಕ್ಷೆ ಮಾಡಿಸಿಕೊಂಡಿದ್ದ ಶಿಕ್ಷಕರಲ್ಲಿ ಉತ್ತರಕನ್ನಡಜಿಲ್ಲೆಯ ಇಬ್ಬರಿಗೆ, ಗದಗ ಜಿಲ್ಲೆಯ 10 ಜನರಿಗೆ ಹಾಗೂ ಹಾಸನದ ಮೂವರಿಗೆ ಮತ್ತು ಹಾವೇರಿ ಜಿಲ್ಲೆಯ ಒಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎನ್ನಲಾಗಿದೆ.