ಬೆಂಗಳೂರು : ನೀರಿನಲ್ಲಿ ಆಟವಾಡಿದ್ದಕ್ಕೆ ಶಿಕ್ಷಕಿಯೊಬ್ಬರು 6 ನೇ ತರಗತಿ ಬಾಲಕನ ಹಲ್ಲು ಮುರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಜಯನಗರದ ಖಾಸಗಿ ಶಾಲೆಯ ಹಿಂದಿ ಶಿಕ್ಷಕಿ 6 ನೇ ತರಗತಿ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಕುರಿತು ಬಾಲಕನ ತಂದೆ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನೀರಿನಲ್ಲಿ ಆಟವಾಡಿದ್ದಕ್ಕೆ ಬಾಲಕನಿಗೆ ಬೈದು ಹಲ್ಲೆ ನಡೆಸಿದ್ದಾರೆ. ಪರಿಣಾಮ ಬಾಲಕನ ಹಲ್ಲು ಮುರಿದಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಶಾಲೆಯಲ್ಲಿ ಚಿಕ್ಕಮಕ್ಕಳು ಚೇಷ್ಟೆ ಮಾಡುವುದು ಸಹಜ. ಆದರೆ ಮನಬಂದಂತೆ ಹಲ್ಲೆ ನಡೆಸುವುದು ಎಷ್ಟು ಸರಿ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.