ಶಾಲಾ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಹೊತ್ತು ಜಾಮೀನಿನ ಮೇಲೆ ಹೊರಗಿದ್ದ ಶಾಲಾ ಶಿಕ್ಷಕಿ ಈ ವೇಳೆ ಮತ್ತೊಬ್ಬ ವಿದ್ಯಾರ್ಥಿಯಿಂದ ಗರ್ಭಿಣಿಯಾಗಿರುವ ಘಟನೆ ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ನಲ್ಲಿ ನಡೆದಿದೆ.
30 ವರ್ಷದ ರೆಬೆಕ್ಕಾ ಜೋಯ್ನ್ಸ್, ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಮ್ಯಾಂಚೆಸ್ಟರ್ ಕ್ರೌನ್ ಕೋರ್ಟ್‌ನಲ್ಲಿ ವಿಚಾರಣೆ ಎದುರಿಸುತ್ತಿದ್ದಾಳೆ. ಬಾಲಕನೊಂದಿಗೆ 6 ಬಾರಿ ಲೈಂಗಿಕ ಚಟುವಟಿಕೆ ನಡೆಸಿದ ಆರೋಪ ಅವಳ ಮೇಲಿದೆ.
ರೆಬೆಕ್ಕಾ ಜೋಯ್ನ್ಸ್ ಮೊದಲ ಬಾರಿಗೆ ಬಾಲಕನೊಬ್ಬನಿಗೆ 35 ಸಾವಿರ ರೂಪಾಯಿ ಬೆಲೆಬಾಳುವ ಬೆಲ್ಟ್ ನೀಡಿ ಆತನನ್ನು ಗ್ರೇಟರ್ ಮ್ಯಾಂಚೆಸ್ಟರ್‌ನ ಸಾಲ್ಫೋರ್ಡ್‌ನಲ್ಲಿರುವ ತನ್ನ ಫ್ಲಾಟ್‌ಗೆ ಕರೆದುಕೊಂಡು ಹೋಗಿದ್ದಳು. ಅಲ್ಲಿ ಆತನೊಂದಿಗೆ ಎರಡು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದಳು. ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಡೆ ಇರುವಾಗ ಮತ್ತೊಬ್ಬ ಹದಿಹರೆಯದವನೊಂದಿಗೆ ಲೈಂಗಿಕ ಸಂಪರ್ಕ ನಡೆಸಿ ಗರ್ಭಿಣಿಯಾಗಿದ್ದಾಳೆ.
ಪ್ರಕರಣದ ವಿಚಾರಣೆ ವೇಳೆ ಕ್ರಾಸ್ ಎಕ್ಸಾಮಿನೇಷನ್‌ನಲ್ಲಿ 2 ನೇ ವಿದ್ಯಾರ್ಥಿಯು ಶಿಕ್ಷಕಿ ರೆಬೆಕ್ಕಾ ಜೋಯ್ನ್ಸ್ ನೊಂದಿಗೆ ಇದ್ದ ಸಂಬಂಧವನ್ನು ವಿವರಿಸಿದ್ದಾನೆ. ತಮ್ಮ ಶಿಕ್ಷಕಿಯಾಗಿದ್ದ ಜೋಯ್ನ್ಸ್ ಅಮಾನತುಗೊಂಡ ನಂತರ ಅವರ ಸಂಪರ್ಕದಲ್ಲಿದ್ದೆ. ತಾನು 15 ವರ್ಷದವನಾಗಿದ್ದಾಗ ಅವರ ಫ್ಲಾಟ್‌ಗೆ ಹೋಗಿ ಶಿಕ್ಷಕಿಯನ್ನು ಚುಂಬಿಸಿದ್ದೆ. 16 ವರ್ಷಕ್ಕೆ ಕಾಲಿಟ್ಟ ನಂತರ ಪೂರ್ಣ ಲೈಂಗಿಕ ಸಂಬಂಧ ಹೊಂದಿದ್ದಾಗಿ ತಿಳಿಸಿದ್ದಾನೆ.
ತಾವು ಪಿಸಿಓಡಿ ಸಮಸ್ಯೆ ಹೊಂದಿರುವುದರಿಂದ ಗರ್ಭಿಣಿಯಾಗಲು ಸಾಧ್ಯವಿಲ್ಲ ಎಂದು ಶಿಕ್ಷಕಿ ತಿಳಿಸಿದ್ದಳಂತೆ. ಹಾಗಾಗಿ ಇಬ್ಬರೂ ನಿರ್ಲಜ್ಜರಾಗಿ ಲೈಂಗಿಕ ಸಂಪರ್ಕ ಹೊಂದಿದ್ದಾಗಿ ತಿಳಿಸಿದ್ದ. ಸದ್ಯ ಜೋಯ್ನ್ಸ್ ಗರ್ಭಿಣಿಯಾಗಿದ್ದು ಲೈಂಗಿಕ ದೌರ್ಜನ್ಯವನ್ನು ತಳ್ಳಿಹಾಕುವಂತಿಲ್ಲ. ವಿದ್ಯಾರ್ಥಿಗಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಂದ ಜೋಯ್ನ್ಸ್ ಳನ್ನು ಶಾಲೆಯಿಂದ ವಜಾ ಮಾಡಲಾಗಿತ್ತು.