ಮಕ್ಕಳಿಗೆ ಶೈಕ್ಷಣಿಕ ಕಲಿಕೆಯನ್ನು ಆಸಕ್ತಿದಾಯಕವಾಗಿಸಲು ಮಿಕ್ಕವರಿಗಿಂತ ಹೆಚ್ಚು ಶ್ರಮ ಹಾಕಿ, ಒಂದು ಹೆಜ್ಜೆ ಮುಂದೆ ಹೋಗುವ ಮೂಲಕ ಆವಿಷ್ಕಾರೀ ವಿಧಾನಗಳನ್ನು ಕಂಡುಕೊಳ್ಳುತ್ತಾರೆ.
ಪ್ರೌಢ ಶಾಲೆಯಲ್ಲಿ ಗಣಿತ ಹಾಗೂ ವಿಶೇಷ ಶಿಕ್ಷಣದ ಶಿಕ್ಷಕಿಯಾಗಿರುವ ಪ್ಯಾಟ್ರಿಸಿಯಾ ಗ್ರೆಸ್ಕೋ ಅವರಲ್ಲಿ ಒಬ್ಬರು. ಪರೀಕ್ಷೆಯೊಂದರಲ್ಲಿ ಹೆಚ್ಚು ಅಂಕ ಗಳಿಸಬೇಕೆಂದರೆ ’ಗಣಿತದ ಚಿತ್ರ’ ಬಿಡಿಸಿ ಎಂದು ಪ್ಯಾಟ್ರಿಸಿಯಾ ತಮ್ಮ ವಿದ್ಯಾರ್ಥಿಗಳಿಗೆ ಸೂಚಿಸಿದ್ದಾರೆ. ಇದಕ್ಕೆ ವಿದ್ಯಾರ್ಥಿಗಳು ಹೇಗೆ ಪ್ರತಿಕ್ರಿಯಿಸಿದರು ಎಂದು ಚಿತ್ರಗಳನ್ನು ತೋರಿಸಿದ್ದು, ಅವೀಗ ನೆಟ್ಟಿಗರ ಹೃದಯ ಗೆದ್ದಿವೆ.
ಗಣಿತ ಶಿಕ್ಷಣದ ಬಗ್ಗೆ ತಮ್ಮ ಮನದಲ್ಲಿ ಬಂದಿದ್ದನ್ನು ಚಿತ್ರ ರೂಪದಲ್ಲಿ ಮಕ್ಕಳು ವ್ಯಕ್ತಪಡಿಸಿರುವುದನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ಪ್ಯಾಟ್ರಿಸಿಯಾರ ಈ ಶ್ರಮಕ್ಕೆ ನೆಟ್ಟಿಗರು ಭೇಷ್ ಎಂದು ಕಾಮೆಂಟ್‌ಗಳನ್ನು ಮಾಡಿದ್ದಾರೆ.
ತರಗತಿಯಲ್ಲಿ ಗಣಿತವನ್ನು ಹೇಗೆಲ್ಲಾ ಕಲಿಸಲಾಗುತ್ತದೆ ಎಂಬುದನ್ನು ತಮ್ಮದೇ ಶೈಲಿಯಲ್ಲಿ ವ್ಯಕ್ತಪಡಿಸಿರುವ ಮಕ್ಕಳ ಕ್ರಿಯಾಶೀಲತೆಗೆ ನೆಟ್ಟಿಗರು ಮೆಚ್ಚಿಕೊಂಡಾಡಿದ್ದಾರೆ. ಈ ವಿಡಿಯೋಗೆ 5.1 ಲಕ್ಷ ವೀಕ್ಷಣೆಗಳು ಸಂದಾಯವಾಗಿದ್ದು, 54,000 ಲೈಕ್‌ಗಳು ಸಿಕ್ಕಿವೆ.