ಶಿಕ್ಷಕರ ಕ್ರಿಯಾಶೀಲತೆಗಳು ಮಕ್ಕಳ ಉತ್ಸಾಹ ಹೆಚ್ಚಿಸಿಬಿಡುತ್ತದೆ, ಇಲ್ಲೊಬ್ಬ ಶಿಕ್ಷಕರು ಮಾಡಿದ ಕರಾಮತ್ತು ಮಕ್ಕಳ ಮುಖದಲ್ಲಿ ನಗು ತರಿಸಿದ್ದಲ್ಲದೇ, ಅವರಲ್ಲೊಂದು ಉತ್ತಮ ಭಾವನೆ ಸೃಷ್ಟಿಗೂ ಕಾರಣವಾಗಿರಬಹುದು.
ಅಂದಹಾಗೆ ಆ ಶಿಕ್ಷಕರು ಮಾಡಿದ್ದೇನು ಗೊತ್ತಾ? ಒಂದು ಪೆಟ್ಟಿಗೆಯನ್ನು ಇಟ್ಟು ಅದರಲ್ಲಿ ಇಣುಕಿನೋಡಿ, ನನ್ನ ನೆಚ್ಚಿನ ಸ್ಟೂಡೆಂಟ್ ಯಾರೆಂದು ತಿಳಿಯುತ್ತದೆ ಎಂದು ತರಗತಿಯಲ್ಲಿನ ಎಲ್ಲ ಮಕ್ಕಳಿಗೆ ಸೂಚಿಸಿದರು.
ಒಬ್ಬೊಬ್ಬರೇ ಪೆಟ್ಟಿಗೆಯಲ್ಲಿ ಇಣುಕಿ ನೀಡಿ ಖುಷಿ ಖುಷಿಯಿಂದ ತಮ್ಮ ಸ್ಥಾನಕ್ಕೆ ಬಂದು ಕುಳಿತರು. ಹಾಗಿದ್ದರೆ ಎಲ್ಲ ಮಕ್ಕಳ ಮುಖದಲ್ಲೂ ಸಂತಸ ತರಲು ಕಾರಣವಾಗಿದ್ದ ಆ ಶಿಕ್ಷಕರ ಸಣ್ಣ ಕ್ರಿಯಾಶೀಲತೆ.
ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಬಿಗ್ ಶಾಕ್: ಅಗತ್ಯ ವಸ್ತು ದರ ಮತ್ತೆ ಏರಿಕೆ
ಆ ಶಿಕ್ಷಕರು ಎಲ್ಲ ಮಕ್ಕಳ ಮುಖದಲ್ಲಿ ಖುಷಿ ತರುವಂತೆ ಏನು ಮಾಡಿದ್ದರೆಂಬ ಕುತೂಹಲ ನಿಮಗೂ ಇದೆಯೇ?
@buitengebieden ಎಂಬುವರು ಟ್ವೀಟರ್ನಲ್ಲಿ ಈ ವಿಡಿಯೋ ಹಂಚಿಕೊಂಡುದ್ದಾರೆ. ಆ ಶಿಕ್ಷಕರು ಪೆಟ್ಟಿಗೆಯಲ್ಲಿ ಕನ್ನಡಿಯೊಂದನ್ನು ಇರಿಸಿದ್ದರು. ಪ್ರತಿ ಮಗುವೂ ಪೆಟ್ಟಿಗೆಯನ್ನು ಇಣುಕಿದಾಗ ಅವರವರ ಮುಖವೇ ಕಾಣಿಸಿದೆ. ಅಂದರೆ, ಶಿಕ್ಷಕರ ನೆಚ್ಚಿನ ಸ್ಟೂಡೆಂಟ್ ನಾನು ಎಂಬ ಹೆಮ್ಮೆ ಅವರಲ್ಲಿ ಮೂಡಿಸಿತ್ತು.
ಇದು ಟರ್ಕಿಯ ಶಾಲಾ ಶಿಕ್ಷಕರಿಂದ ಸ್ವೀಟ್ ಗೆಸ್ಚರ್ ಒಳಗೊಂಡ ವಿಡಿಯೋ ಕ್ಲಿಪ್ ಆಗಿದ್ದು ನೆಟ್ಟಿಗರ ಹೃದಯ ಗೆದ್ದಿದೆ. 15 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದ್ದು ನೂರಾರು ಪ್ರತಿಕ್ರಿಯೆ ಬಂದಿದ್ದು, ಶಿಕ್ಷಕನ ಜಾಣ್ಮೆ ಕೊಂಡಾಡಿದ್ದಾರೆ.
https://twitter.com/buitengebieden/status/1522837476515225602?ref_src=twsrc%5Etfw%7Ctwcamp%5Etweetembed%7Ctwterm%5E1522837476515225602%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fteacher-asks-children-to-find-out-who-his-favourite-student-is-by-looking-into-a-box-guess-what-they-saw-1948199-2022-05-11
https://twitter.com/b_bajangirl001/status/1522896591576870915?ref_src=twsrc%5Etfw%7Ctwcamp%5Etweetembed%7Ctwterm%5E1522896591576870915%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ft