ರಾಣಿ ಬಳಸಿದ ಟೀ ಬ್ಯಾಗ್ ಮಾರಾಟವಾಗುತ್ತಿರುವ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..! 12-09-2022 3:52PM IST / No Comments / Posted In: Latest News, Live News, International ಸುದೀರ್ಘ ಸೇವೆ ಸಲ್ಲಿಸಿದ ಖ್ಯಾತಿ ಹೊಂದಿರುವ ರಾಣಿ ಎಲಿಜಬೆತ್ 2, ಸೆಪ್ಟೆಂಬರ್ 8 ರಂದು ತಮ್ಮ 96ನೇ ವಯಸ್ಸಿನಲ್ಲಿ ನಿಧನರಾದರು. ಇಡೀ ಪ್ರಪಂಚವು ತಮ್ಮದೇ ಆದ ರೀತಿಯಲ್ಲಿ ರಾಣಿಯ ಸಾವಿಗೆ ಸಂತಾಪ ಸೂಚಿಸಿತು. ಅವರ ನಿಧನದ ಸ್ಮರಣಾರ್ಥ ಅವರು ಉಪಯೋಗಿಸಿದ ಕೆಲವು ವಸ್ತುಗಳನ್ನು ಹರಾಜು ಹಾಕಲು ನಿರ್ಧರಿಸಲಾಗಿದೆ. ಅದರಲ್ಲಿ ಟೀ ಬ್ಯಾಗ್ ಕೂಡ ಒಂದು. ಹೌದು, 90 ರ ದಶಕದಲ್ಲಿ ರಾಣಿ ತನ್ನ ಕಪ್ಗಳಲ್ಲಿ ಒಂದಕ್ಕೆ ಅದ್ದಿದ ಚಹಾ ಚೀಲವನ್ನು ಬಳಕೆಯ ನಂತರ, ವಿಂಡ್ಸರ್ ಕೋಟೆಯಿಂದ ಕಳ್ಳಸಾಗಣೆ ಮಾಡಲಾಗಿದೆ ಎಂದು ಹೇಳಲಾಗಿದೆ. ಇದೀಗ ಆ ವಸ್ತುವಿಗೆ ಈಗ ಇಬೇ ನಲ್ಲಿ ಬರೋಬ್ಬರಿ ಡಾಲರ್ 12,000 ಬೆಲೆ ಅಂದರೆ ಸರಿಸುಮಾರು 9.5 ಲಕ್ಷಕ್ಕೆ ಮಾರಾಟ ಮಾಡಲಾಗುತ್ತಿದೆ. ಕ್ವೀನ್ ಎಲಿಜಬೆತ್-2 ಉಪಯೋಗಿಸಿದ ಅಪರೂಪದ ಟೀ ಬ್ಯಾಗ್ ಅಂತಾ ಇ-ಕಾಮರ್ಸ್ ಪ್ಲಾಟ್ಫಾರ್ಮ್ನಲ್ಲಿ ತಿಳಿಸಲಾಗಿದೆ. ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ರಾಣಿ ಎಲಿಜಬೆತ್-2ರ ಎರಡು ಮೇಣದ ಪ್ರತಿಮೆಗಳನ್ನು ಸಹ ಪಟ್ಟಿ ಮಾಡಲಾಗಿದೆ. ಪ್ರಸ್ತುತ ಒಂದು ಡಾಲರ್ 15,900 (ಸುಮಾರು ರೂ 12.6 ಲಕ್ಷಗಳು) ಬೆಲೆಗೆ ಮಾರಾಟ ಮಾಡುವ ನಿರೀಕ್ಷೆಯಲ್ಲಿದೆ. Teabag 'used' by Queen Elizabeth selling for $12K on eBay after death pic.twitter.com/ulxUBwggW4 — SAY CHEESE! 👄🧀 (@SaycheeseDGTL) September 9, 2022