alex Certify ಮದ್ಯ ಪ್ರಿಯರಿಗೂ ಇಷ್ಟವಾಗುತ್ತೆ ಗೋವಾದ ಈ ಚಹಾ; ಇದಕ್ಕೆ ಮಿಕ್ಸ್‌ ಮಾಡೋದೇನು ಅಂತ ತಿಳಿದ್ರೆ ಅಚ್ಚರಿಪಡ್ತೀರಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯ ಪ್ರಿಯರಿಗೂ ಇಷ್ಟವಾಗುತ್ತೆ ಗೋವಾದ ಈ ಚಹಾ; ಇದಕ್ಕೆ ಮಿಕ್ಸ್‌ ಮಾಡೋದೇನು ಅಂತ ತಿಳಿದ್ರೆ ಅಚ್ಚರಿಪಡ್ತೀರಾ…!

ಪಣಜಿ: ಸುಂದರವಾದ ಕಡಲತೀರಗಳು, ಆಲಂಕಾರಿಕ ರೆಸ್ಟೋರೆಂಟ್‌ಗಳ ಜತೆ ಮದ್ಯದ ರಾಜ್ಯ ಎಂದಾಕ್ಷಣ ನೆನಪಾಗುವುದು ಗೋವಾ. ಇಲ್ಲಿ ಮದ್ಯಕ್ಕೆ ವಿಶೇಷ ಆದ್ಯತೆ ಇದ್ದು, ಅದನ್ನು ಸವಿಯುವುದಕ್ಕಾಗಿಯೇ ದೇಶ-ವಿದೇಶಗಳಿಂದ ಜನರು ಬರುತ್ತಾರೆ. ಆದರೆ ಕುತೂಹಲ ಹಾಗೂ ವಿಚಿತ್ರ ಎನಿಸುವ ಮದ್ಯವೊಂದನ್ನು ತಯಾರಿಸುವ ವಿಡಿಯೋ ಇದೀಗ ವೈರಲ್​ ಆಗಿದೆ.

ಚಹಾ ಮತ್ತು ಓಲ್ಡ್ ಮಾಂಕ್ ರಮ್‌ ಎರಡನ್ನೂ ಮಿಶ್ರಣ ಮಾಡಿ ಮಾರಾಟ ಮಾಡುವ ವಿಡಿಯೋ ಒಂದು ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಸಿಂಕ್ವೆರಿಮ್ ಬೀಚ್‌ನಲ್ಲಿ ಕಂಡುಬಂದಿದೆ. ರಸ್ತೆ ಬದಿ ವ್ಯಾಪಾರಿಯೊಬ್ಬರು ಈ ಮಿಶ್ರಣವನ್ನು ತಯಾರಿಸುತ್ತಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವ್ಯಾಪಾರಿಯೊಬ್ಬ ಮಣ್ಣಿನ ಮಡಕೆಯನ್ನು ಬಿಸಿಮಾಡುವ ಮೂಲಕ ಮತ್ತು ಅದನ್ನು ಇಕ್ಕಳದಿಂದ ಎತ್ತಿಕೊಳ್ಳುವ ಮೂಲಕ ಈ ವಿಡಿಯೋ ಪ್ರಾರಂಭವಾಗುತ್ತದೆ. ನಂತರ ಆತ ಮಡಕೆಗೆ ಬೆಂಕಿ ಹಚ್ಚುತ್ತಾನೆ ಮತ್ತು ಬಾಟಲಿಯಿಂದ ಓಲ್ಡ್ ಮಾಂಕ್ ರಮ್ ಅನ್ನು ಸೇರಿಸುತ್ತಾನೆ. ನಂತರ ಟೀ ಪಾಟ್​ನಿಂದ ಚಹಾವನ್ನು ಮಿಶ್ರಣಕ್ಕೆ ಸುರಿಯಲಾಗುತ್ತದೆ. ಪಾನೀಯ ಸಿದ್ಧವಾದ ನಂತರ, ಅವನು ಅದನ್ನು ನೀಡುತ್ತಾನೆ.

ಇದನ್ನು ನೋಡಿದ ಮದ್ಯ ಪ್ರಿಯರು ಬಾಯಲ್ಲಿ ನೀರು ಸುರಿಸುತ್ತಿದ್ದು, ಹಲವಾರು ರೀತಿಯ ಕಮೆಂಟ್​ ಹಾಕುತ್ತಿದ್ದಾರೆ. ಇದನ್ನು ಒಮ್ಮೆಯಾದರೂ ಸೇವಿಸಲೇಬೇಕು ಎಂದು ಹಲವರು ಹೇಳುತ್ತಿದ್ದಾರೆ.

https://twitter.com/DrVW30/status/1588171508362665984?ref_src=twsrc%5Etfw%7Ctwcamp%5Etweetembed%7Ctwterm%5E1588171508362665984%7Ctwgr%5E44233adb7911a149eccf8abf29027cb644f81b28%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Ftea-with-a-shot-of-old-monk-goa-vendors-delicacy-is-shaking-up-the-internet-6315451.html

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Kouzlo vody: Jak udělat z akvária skvělou dekoraci Чешский язык: Тест на IQ: найдите 3 стрелки за Co se stane, když kočku zataháte Originální recept