ಬೆಂಗಳೂರು: ನೀವು ಚಹಾ ಪ್ರಿಯರಾಗಿದ್ದರೆ ಈ ಸುದ್ದಿ ಓದಲೇಬೇಕು…. ಟೀಯಲ್ಲಿಯು ಕೃತಕ ಬಣ್ಣ, ರಾಸಾಯನಿಕ ಬಳಕೆ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಗೋಬಿ ಮಂಚೂರಿ, ರಸ್ತೆ ಬದಿಯ ಆಹಾರ, ಪಾನಿಪುರಿ ಬಳಿಕ ಇದೀಗ ಚಹಾ ಪುಡಿಯಲ್ಲಿಯೂ ಕೃತಕ ಬಣ್ಣ, ಕೆಮಿಕಲ್ ಬಳಕೆ, ರುಚಿ ಹೆಚ್ಚಿಸಲು ರಾಸಾಯನಿಕ ಬಳಕೆ ಮಾಡಲಾಗುತ್ತಿದೆ ಎಂಬ ಆಘಾತಕಾರಿ ಸಂಗತಿ ಬಯಲಾಗಿದೆ. ರೋಡ್ ಸೈಡ್ ಚಹಾ ಕುಡಿಯುವವರಿಗಂತು ಇದು ನಿಜಕ್ಕೂ ಶಾಕಿಂಗ್ ಸುದ್ದಿ. ಹೌದು. ಟೀ ಪೌಡರ್ ನಲ್ಲಿಯೂ ಕೃತಕ ಬಣ್ಣ, ರುಚಿ ಬಳಸಲಾಗುತ್ತಿದೆ.
ಈ ಬಗ್ಗೆ ಫುಡ್ ಸೇಫ್ಟಿ ಇಲಾಖೆ ಕಮಿಷ್ನರ್ ಶ್ರೀನಿವಾಸ್ ಮಾಹಿತಿ ನೀಡಿದ್ದು, ಚಹಾ ಪುಡಿಯಲ್ಲಿಯೂ ಬಣ್ಣ, ಕೆಮಿಕಲ್, ರುಚಿ ಹೆಚ್ಚಿಸುವ ರಾಸಾಯನಿಕ ಬಳಸಲಾಗುತ್ತಿದೆ. ಕೃತಕ ಬಣ್ಣ ಮಾತ್ರವಲ್ಲ ಮರದ ಪುಡಿಯನ್ನೂ ಬೆರೆಸಲಾಗುತ್ತಿದೆ. ಬೆಂಗಳೂರಿನ ಹಲವೆಡೆ ಇಂಥಹ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.
ಚಹಾ ಪುಡಿ ಅಷ್ಟೇ ಅಲ್ಲ, ಇತ್ತೀಚಿನ ದಿನಗಳಲ್ಲಿ ಸಿಹಿ ತಿಂಡಿ, ಬೇಕರಿ ಪದಾರ್ಥಗಳಲ್ಲಿಯೂ ರುಚಿ ಹೆಚ್ಚಿಸುವ ನಿಟ್ಟಿನಲ್ಲಿ ಕೆಮಿಕಲ್ ಬಳಕೆ ಹಾಗೂ ಕೃತಕ ಬಣ್ಣಗಳನ್ನು ಬೆರೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಇಂತಹ ಟೀ ಪುಡಿ ಹಾಗೂ ರಾಸಾಯನಿಕಗಳನ್ನು ನಿಷೇಧಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ.