
ನಮ್ಮ ದೇಶದಲ್ಲಿ ಚಹಾ ಪ್ರಿಯರಿಗೇನು ಕೊರತೆ ಇಲ್ಲ. ಈ ಚಹಾ ಪ್ರೀತಿ ಅನೇಕರಲ್ಲಿ ಚಟವಾಗಿ ಬದಲಾಗಿದೆ. ಈ ಚಟದಿಂದ ಹೊರಬರಲಾಗದ ಅನೇಕರು ದಿನಕ್ಕೆ 5-6 ಬಾರಿ ಚಹಾ ಸೇವಿಸುವ ಅಭ್ಯಾಸವನ್ನ ರೂಢಿಸಿಕೊಂಡಿದ್ದಾರೆ.
ನೀವು ಕೂಡ ದಿನಕ್ಕೆ ಹಲವಾರು ಬಾರಿ ಚಹಾ ಸೇವನೆ ಮಾಡುವ ಅಭ್ಯಾಸ ಹೊಂದಿದರವರಾಗಿದ್ದಲ್ಲಿ ನೀವು ಈ ಸ್ಟೋರಿಯನ್ನ ಓದಲೇಬೇಕು. ಮಾತ್ರವಲ್ಲದೇ ಆದಷ್ಟು ಬೇಗ ಈ ಅಭ್ಯಾಸವನ್ನ ಬಿಡಲೇಬೇಕು. ಇದು ನಿಮ್ಮ ದೇಹಕ್ಕೆ ಎಷ್ಟರ ಮಟ್ಟಿಗೆ ಡೇಂಜರಸ್ ಅನ್ನೋದನ್ನ ನಿಮಗೆ ಊಹಿಸೋಕೂ ಸಾಧ್ಯವಿಲ್ಲ. ಅತಿಯಾದ ಚಹಾದ ಸೇವನೆಯಿಂದ ನೀವು ಕ್ಯಾನ್ಸರ್ ರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ.
ಆರೋಗ್ಯ ತಜ್ಞರು ನೀಡುವ ಮಾಹಿತಿಯ ಪ್ರಕಾರ ಖಾಲಿ ಹೊಟ್ಟೆಯಲ್ಲಿ ಚಹಾ ಸೇವನೆ ಮಾಡೋದ್ರಿಂದ ದೇಹದಲ್ಲಿ ಆಮ್ಲೀಯ ವಸ್ತು ಉತ್ಪತ್ತಿ ಆಗುತ್ತೆ. ಇದರಿಂದಾಗಿ ಹೊಟ್ಟೆಯಲ್ಲಿರುವ ಟಿಶ್ಯೂ ನಾಶವಾಗುತ್ತಾ ಹೋಗುತ್ತದೆ. ಇದರಿಂದಾಗಿ ಅಸಿಡಿಸಿ, ಅಜೀರ್ಣ, ಪದೇ ಪದೇ ಹೊಟ್ಟೆ ಕೆಡುವುದು, ಎದೆಯುರಿಯಂತಹ ಸಮಸ್ಯೆಗಳು ಕಾಡೋಕೆ ಶುರುವಾಗುತ್ತದೆ.
ಖಾಲಿ ಹೊಟ್ಟೆಯಲ್ಲಿ ಚಹಾ ಸೇವನೆ ಮಾಡೋದ್ರಿಂದ ಪಿತ್ತರಸದಲ್ಲಿ ವ್ಯತ್ಯಯ ಉಂಟಾಗಲಿದೆ. ಇದರಿಂದ ವಾಕರಿಕೆ ಸಮಸ್ಯೆ ಉಂಟಾಗಬಹುದು. ಅಲ್ಲದೇ ಪುರುಷರಲ್ಲಿ ಜನನೇಂದ್ರಿಯ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.
ನೀವು ದಿನಕ್ಕೆ 7-8 ಬಾರಿ ಚಹಾ ಸೇವಿಸುವ ಅಭ್ಯಾಸ ಹೊಂದಿದ್ರೆ ನೀವು ಈ ಅಭ್ಯಾಸವನ್ನ ಬಿಟ್ಟು ಬಿಡೋದು ಒಳ್ಳೆಯದು. ಯಾಕೆಂದರೆ ಇದರಿಂದ ಅನ್ನನಾಳ ಹಾಗೂ ಗಂಟಲಿನಲ್ಲಿ ಕ್ಯಾನ್ಸರ್ ಉಂಟಾಗಲಿದೆ. ಹೀಗಾಗಿ ನಿಮ್ಮ ಚಹಾ ಪ್ರೀತಿ ದಿನಕ್ಕೆ ಎರಡು ಕಪ್ ಮೀರದಂತೆ ನೋಡಿಕೊಳ್ಳೋದು ತುಂಬಾನೇ ಒಳ್ಳೆಯದು.