ಶೇರುಗಳ ಮರುಖರೀದಿ ಪ್ರಸ್ತಾವನೆಯನ್ನು ಆಡಳಿತ ಮಂಡಳಿಯ ನಿರ್ದೇಶಕರು ಜನವರಿ 12ರಂದು ಪರಿಗಣಿಸಲಿದ್ದಾರೆ ಎಂದು ದೇಶದ ಐಟಿ ಸೇವೆಗಳ ಅತ್ಯಂತ ದೊಡ್ಡ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ (ಟಿಸಿಎಸ್) ಘೋಷಿಸಿದೆ. ಈ ಸಂಬಂಧ ವಿತ್ತೀಯ ವರ್ಷ 21 ರ ಮೂರನೇ ತ್ರೈಮಾಸಿಕದ ಫಲಿತಾಂಶಗಳನ್ನು ಅದೇ ದಿನದಂದು ಟಿಸಿಎಸ್ ಬಿಡುಗಡೆ ಮಾಡಲಿದೆ.
ಡಿಸೆಂಬರ್ 18, 2020 ಮತ್ತು ಜನವರಿ 1, 2021ರ ನಡುವೆ 16,000 ಕೋಟಿ ರೂ.ಗಳ ವೆಚ್ಚದಲ್ಲಿ ಕೊನೆಯ ಬಾರಿಗೆ ತನ್ನ ಶೇರುಗಳನ್ನು ಮರಳಿ ಖರೀದಿಸಿತ್ತು ಟಿಸಿಎಸ್. 2017, 2018 ಮತ್ತು 2020ರಲ್ಲಿ ಇದೇ ರೀತಿಯ ಮರುಖರೀದಿ ಪ್ರಕ್ರಿಯೆಯನ್ನು ಟಿಸಿಎಸ್ ಮಾಡಿತ್ತು.
ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಸಿಹಿ ಸುದ್ದಿ, 1.20 ಲಕ್ಷ ಉದ್ಯೋಗಾವಕಾಶ- TCS, ಇನ್ಫೋಸಿಸ್, ವಿಪ್ರೋದಲ್ಲಿ ಭಾರಿ ನೇಮಕಾತಿ
2021-22ರ ವಿತ್ತೀಯ ವರ್ಷದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದ ವೇಳೆ ಟಿಸಿಎಸ್ 9,624 ಕೋಟಿ ರೂ.ಗಳ ನಿವ್ವಳ ಲಾಭ ಪಡೆಯುವ ಮೂಲಕ 14.1 ಪ್ರತಿಶತದಷ್ಟು ಪ್ರಗತಿ ಸಾಧಿಸಿತ್ತು (ವರ್ಷದಿಂದ-ವರ್ಷಕ್ಕೆ).
ಬೋರ್ಡ್ ಮೀಟಿಂಗ್ ವೇಳೆ, ಮೂರನೇ ಮಧ್ಯಂತರ ಡಿವಿಡೆಂಡ್ ಅನ್ನು ಈಕ್ವಿಟಿ ಶೇರುದಾರರಿಗೆ ಹಂಚುವ ಸಂಬಂಧ ಟಿಸಿಎಸ್ ನಿರ್ಣಯ ಕೈಗೊಳ್ಳಲಿದೆ ಎನ್ನಲಾಗಿದೆ.
ಇದೇ ವೇಳೆ, ತಂತಮ್ಮ ಮೂರನೇ ತ್ರೈಮಾಸಿಕದ (ಅಕ್ಟೋಬರ್-ಡಿಸೆಂಬರ್) ವರದಿಯನ್ನು ಟಿಸಿಎಸ್ ಎದುರಾಳಿಗಳಾದ ಇನ್ಫೋಸಿಸ್, ಎಚ್‌ಸಿಎಲ್ ಸಹ ಇದೇ ಜನವರಿ 12ರಂದು ಬಿಡುಗಡೆ ಮಾಡಲಿವೆ.