ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(TCS) ಸಾವಿರಾರು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸೆಸ್ ಲಿಮಿಟೆಡ್ ಐಟಿ ಇನ್‌ಪ್ರಾಸ್ಟ್ರಕ್ಚರ್ ಸರ್ವೀಸ್, ಟೆಕ್ನಾಲಜಿ, ಬ್ಯುಸಿನೆಸ್ ಪ್ರೋಸೆಸ್ ಸರ್ವೀಸ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅಗತ್ಯ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.
ವಿವಿಧ ಹುದ್ದೆಗಳ ಅರ್ಜಿ ಸಲ್ಲಿಕೆಗೆ ಮೇ 31, ಜೂನ್ 29, ಜುಲೈ 30 ಕೊನೆ ದಿನಾಂಕ ನಿಗದಿಪಡಿಸಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ವೈರ್‌ಲೈನ್ – ವೈರ್‌ಲೆಸ್ ನೆಟ್‌ವರ್ಕ್ ಸೆಕ್ಯೂರಿಟಿ, ಇಪಿ ಡ್ರೈವ್, ಆಪರೇಷನ್ ಸ್ಪೆಷಲಿಸ್ಟ್, ಕಸ್ಟಮರ್ ಸರ್ವೀಸ್, ಆಕ್ಟಿವ್ ಡೈರೆಕ್ಟರಿ, ವಿಂಡೋಸ್ ಅಡ್ಮಿನ್, ಜಾವ ಡೆವಲಪರ್, ಪಬ್ಲಿಕ್ ಕ್ಲೌಡ್ ಎಡಬ್ಲ್ಯೂಎಸ್ ಅಡ್ಮಿನ್, ಬ್ಯಾಕಪ್ ಅಡ್ಮಿನ್, ಸ್ಟೋರೇಜ್ ಅಡ್ಮಿನ್, ನೆಟ್‌ವರ್ಕ್ ಅಡ್ಮಿನ್, ಡಾಟಾಬೇಸ್ ಅಡ್ಮಿನ್ ಮೊದಲಾದ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಟಿಸಿಎಸ್ ಕರಿಯರ್ ವೆಬ್ ಪೇಜ್ https://ibegin.tcs.com/iBegin/jobs/search ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಎಂದು ಹೇಳಲಾಗಿದೆ.