ತನ್ನ ’ಸ್ಮಾರ್ಟ್ ಹೈರಿಂಗ್’ ಕಾರ್ಯಕ್ರಮದ ಮುಂದಿನ ಹೆಜ್ಜೆಯನ್ನು ಘೋಷಿಸಿದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಇದೀಗ ತಾನೇ ಪದವಿ ಪೂರೈಸಿರುವ ಮಂದಿಯನ್ನು ಹೈರ್ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದೆ.
ಐಟಿ ಕಂಪನಿಗಳಲ್ಲಿ ಕೆಲಸ ಮಾಡಲು ಅಗತ್ಯವಾದ ಕೌಶಲ್ಯಗಳನ್ನು ಕಲಿಯಲು ಪದವಿ ಪೂರೈಸಿರುವ ಮಂದಿ ಅರ್ಜಿ ಸಲ್ಲಿಸಬಹುದಾಗಿದೆ. ಟಿಸಿಎಸ್ ಸ್ಮಾರ್ಟ್ ಹೈರಿಂಗ್ ಕಾರ್ಯಕ್ರಮದ ಅಗ್ರ ಸಾಧಕರಿಗೆ ತಂತ್ರಜ್ಞಾನ ಲೋಕದ ದಿಗ್ಗಜ ಸಂಸ್ಥೆಯ ಟಿಸಿಎಸ್ ಇಗ್ನೈಟ್ ಕಾರ್ಯಕ್ರಮದಲ್ಲಿ ಉದ್ಯೋಗ ಗಿಟ್ಟಿಸುವ ಅವಕಾಶವಿದೆ.
ಟಿಸಿಎಸ್ ಸ್ಮಾರ್ಟ್ ಹೈರಿಂಗ್ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ನವೆಂಬರ್ 2 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸಲು ಆಸಕ್ತರಾದ ಅಭ್ಯರ್ಥಿಗಳು ಇದಕ್ಕೆ ಪರೀಕ್ಷೆಯೊಂದನ್ನು ಎದುರಿಸಬೇಕು. ನವೆಂಬರ್ 19ರಿಂದ ಆರಂಭವಾಗುವ ದಿನಾಂಕದಿಂದ ಪರೀಕ್ಷೆ ಆರಂಭವಾಗಲಿದೆ.
BIG NEWS: ಯುವಕನನ್ನು ಭೀಕರವಾಗಿ ಕೊಲೆಗೈದು ಠಾಣೆಗೆ ಹೊತ್ತು ತಂದ ಕಿರಾತಕರು; ಶಾಕ್ ಆದ ಪೊಲೀಸರು
ಬಿಸಿಎ, ಬಿಎಸ್ಸಿ (ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಎಲೆಕ್ಟ್ರಾನಿಕ್ಸ್, ಬಯೋಕೆಮಿಸ್ಟ್ರಿ ಮತ್ತು ಗಣಕ ವಿಜ್ಞಾನ ಇತ್ಯಾದಿ) ಪೂರ್ಣವಾಗಿ ಪೂರೈಸಿದ ಅಭ್ಯರ್ಥಿಗಳು ಕೋರ್ಸ್ಗೆ ಅರ್ಜಿ ಸಲ್ಲಿಸಬಹುದಾಗಿದೆ.
2020, 2021 ಮತ್ತು 2022ರಲ್ಲಿ ಪಾಸ್ಔಟ್ ಆದ ಅಭ್ಯರ್ಥಿಗಳು ಅಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಕನಿಷ್ಠ 50% ಅಂಕ ಅಥವಾ 5 ಸಿಜಿಪಿಎ ಪಡೆದಿರಬೇಕು.
ಪ್ರಸಕ್ತ ವಿತ್ತೀಯ ವರ್ಷದ ಮೊದಲ ಆರು ತಿಂಗಳ ಅವಧಿಯಲ್ಲಿ ಟಿಸಿಎಸ್ ಅದಾಗಲೇ 43,000 ಮಂದಿಯನ್ನು ಹೈರಿಂಗ್ ಮಾಡಿದೆ. ಇನ್ನುಳಿದ ಆರು ತಿಂಗಳಲ್ಲಿ 35,000ಕ್ಕೂ ಹೆಚ್ಚಿನ ಹೈರಿಂಗ್ ಮಾಡಲು ಟಿಸಿಎಸ್ ಉದ್ದೇಶಿಸಿದೆ.