ಆದಾಯ ತೆರಿಗೆ ಇಲಾಖೆ ತನ್ನ ಹೊಸ ಪೋರ್ಟಲ್ ಇ-ಫೈಲಿಂಗ್ 2.0 ಅನ್ನು ಸೋಮವಾರ ಬಿಡುಗಡೆ ಮಾಡಿದೆ. ಇದು ಮೊದಲಿಗಿಂತ ಹೆಚ್ಚು ಬಳಕೆದಾರ ಸ್ನೇಹಿಯಾಗಿದೆ. ತೆರಿಗೆದಾರರು ಸ್ವತಃ ತಮ್ಮ ತೆರಿಗೆ ರಿಟರ್ನ್ಸ್ ಅನ್ನು ಸುಲಭವಾಗಿ ಸಲ್ಲಿಸಬಹುದು. ಮರುಪಾವತಿ ಸ್ಥಿತಿಯನ್ನು ಪರಿಶೀಲಿಸಬಹುದು. ತೆರಿಗೆ ಪಾವತಿಗಳನ್ನು ಮಾಡಬಹುದು.
ಹೊಸ ತೆರಿಗೆ ಪೋರ್ಟಲ್ www.incometax.gov.in ಗೆ ಭೇಟಿ ನೀಡುವ ಮೂಲಕ ತೆರಿಗೆದಾರರು ತಮ್ಮ ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್ ಅನ್ನು ತಕ್ಷಣ ಮರು ನೋಂದಾಯಿಸುವಂತೆ ಆದಾಯ ತೆರಿಗೆ ಇಲಾಖೆ ಕೇಳಿದೆ. ಇದಲ್ಲದೆ, ಪ್ರಾಥಮಿಕ ಸಂಪರ್ಕಕ್ಕೆ ಹೋಗುವ ಮೂಲಕ ವೈಯಕ್ತಿಕ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ನವೀಕರಿಸುವಂತೆ ಸೂಚಿಸಿದೆ.
ಆದಾಯ ತೆರಿಗೆಯ ಹೊಸ ವೆಬ್‌ಸೈಟ್‌ನಲ್ಲಿ, ಪ್ರತಿ ತೆರಿಗೆದಾರರ ವರ್ಗವನ್ನು ಪ್ರತ್ಯೇಕವಾಗಿ ನೀಡಲಾಗಿದೆ. ಉದಾಹರಣೆಗೆ, ವೈಯಕ್ತಿಕ, ಕಂಪನಿ, ಕಂಪನಿ ಅಲ್ಲದ ತೆರಿಗೆ ವೃತ್ತಿಪರರಿಗೆ ಪ್ರತ್ಯೇಕ ವರ್ಗವಿದೆ. ಇ-ಫೈಲಿಂಗ್ ಪೋರ್ಟಲ್‌ನಲ್ಲಿ 846 ಕೋಟಿಗೂ ಹೆಚ್ಚು ವೈಯಕ್ತಿಕ ನೋಂದಾಯಿತ ಬಳಕೆದಾರರಿದ್ದಾರೆ. ಹೊಸ ಪೋರ್ಟಲ್ ಬಳಕೆದಾರರ ಕೈಪಿಡಿಗಳು, ಎಫ್ ಎಕ್ಯೂಗಳು ಮತ್ತು ವಿಡಿಯೊಗಳನ್ನು ಸಹ ಹೊಂದಿದೆ. ತೆರಿಗೆದಾರರಿಗೆ ಇದ್ರಿಂದ ವೆಬ್‌ಸೈಟ್ ಅನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ನೆರವಾಗುತ್ತದೆ.
ನೋಂದಾಯಿತ ಬಳಕೆದಾರರು ಪೋರ್ಟಲ್ ತೆರೆದಾಗ ಟೂರ್ ಗೈಡ್ ಸಿಗಲಿದೆ. ಇದ್ರಿಂದ ಅವರು ವೆಬ್ಸೈಟನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ನಂತ್ರ ಅಪ್ಡೇಟ್ ಪ್ರೊಪೈಲ್ ಆಯ್ಕೆ ಸಿಗಲಿದೆ. ದೂರು ಇದ್ದರೆ ಅದಕ್ಕೂ ಆಯ್ಕೆಯಿದೆ.