alex Certify ನೂರಾರು ಮಂದಿಯ ಪ್ರಾಣ ಉಳಿಯಲು ಕಾರಣವಾಯ್ತು ಚಾಲಕನ ಸಮಯಪ್ರಜ್ಞೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೂರಾರು ಮಂದಿಯ ಪ್ರಾಣ ಉಳಿಯಲು ಕಾರಣವಾಯ್ತು ಚಾಲಕನ ಸಮಯಪ್ರಜ್ಞೆ

ಯುಕೆಯಲ್ಲಿ ನಡೆದ ಉಗ್ರರ ಕಾರು ಸ್ಪೋಟ ಪ್ರಕರಣದಲ್ಲಿ‌ ಈಗ ಕಾರು ಚಾಲಕನ ಸಮಯೋಚಿತ ನಿರ್ಧಾರ ವಿಶ್ವದ ಗಮನ ಸೆಳೆದಿದೆ.

ಡೇವಿಡ್ ಪೆರ್ರಿ ಎಂದು ಗುರುತಿಸಲಾದ ಚಾಲಕನು ಕ್ಯಾಬ್‌ನಲ್ಲಿ ಪ್ರಯಾಣಿಕ ಅನುಮಾನಾಸ್ಪದ ವಸ್ತು ಸಾಗಿಸುತ್ತಿದ್ದಾನೆ ಎಂಬುದನ್ನು ಗಮನಿಸಿ ಆತನನ್ನು ಲಾಕ್ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

ಚಾಲಕನ ಸಮಯೋಚಿತ ಕ್ರಮದಿಂದ ಶಂಕಿತನು ತಲುಪಬೇಕಾದ ಸ್ಥಳ ತಲುಪಲಿಲ್ಲ. ಹೀಗಾಗಿ ದೊಡ್ಡ ಅನಾಹುತ ತಪ್ಪಿದೆ‌, ಕ್ಯಾಬ್ ಚಾಲಕನ ಈ ಎಚ್ಚರಿಕೆ ನಡೆ ಪ್ರಶಂಸೆಗೆ ಪಾತ್ರವಾಗಿದೆ.

ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತಿನ್ನಿ ಖರ್ಜೂರ

ಟ್ಯಾಕ್ಸಿಯು ಲಿವರ್‌ಪೂಲ್ ಮಹಿಳಾ ಆಸ್ಪತ್ರೆಯ ಹೊರಗೆ ನಿಲ್ಲುವ ಮುನ್ನವೇ ಸ್ಫೋಟಗೊಳ್ಳುವುದು ಬಿಡುಗಡೆಯಾದ ಸಿಸಿ ಟಿವಿ ವಿಡಿಯೋ ದೃಶ್ಯಾವಳಿಯಲ್ಲಿ ಕಾಣಿಸುತ್ತದೆ. ಆ ಧೈರ್ಯಶಾಲಿ ಟ್ಯಾಕ್ಸಿ ಚಾಲಕ ಸ್ಫೋಟದಿಂದ ತಪ್ಪಿಸಿಕೊಳ್ಳುವ ಮೊದಲು ತನ್ನ ವಾಹನದೊಳಗೆ ಬಾಂಬರ್ ಅನ್ನು ಸಿಕ್ಕಿಹಾಕಿಸುವುದು ಕಾಣಿಸುತ್ತದೆ.

ಭಯಾನಕ ದೃಶ್ಯಾವಳಿಯಲ್ಲಿ ಸ್ಥಳದಲ್ಲಿದ್ದವರು ಸಹಾಯ ನೀಡಲು ಓಡುತ್ತಿರುವಾಗ ಹೊಗೆಯು ಆ ಪ್ರದೇಶವನ್ನು ಆವರಿಸುತ್ತದೆ. ಕ್ಯಾಬ್ ಚಾಲಕನು ವಾಹನದಿಂದ ಇಳಿದು ಜನರನ್ನು ದೂರವಿರಲು ಎಚ್ಚರಿಸುತ್ತಾನೆ. ಕೆಲವು ಸೆಕೆಂಡುಗಳ ನಂತರ ವಾಹನವು ಹೊಗೆ ಬೆಂಕಿಯ ಜ್ವಾಲೆಯಲ್ಲಿ ಮುಚ್ಚಿಹೋಗುವುದು ಕಂಡುಬರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...