ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚೆಗೆ ಬಜೆಟ್ ಮಂಡನೆ ಮಾಡಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಲವು ಘೋಷಣೆಗಳನ್ನು ಮಾಡಿದ್ದಾರೆ. ಆದರೆ ಪ್ರತಿಬಾರಿಯಂತೆ ಈ ಬಾರಿಯೂ ಸಹ ಮಧ್ಯಮ ವರ್ಗದವರಿಗೆ ಬರೆ ಎಳೆಯಲಾಗಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.
ಬಜೆಟ್ ಮೇಲಿನ ಚರ್ಚೆಯಲ್ಲಿ ರಾಜ್ಯಸಭೆಯಲ್ಲಿ ಮಾತನಾಡಿರುವ ಆಮ್ ಆದ್ಮಿ ಪಕ್ಷದ ಸದಸ್ಯ ರಾಘವ್ ಚಡ್ಡಾ, ಹಣಕಾಸು ಸಚಿವರು ಮಂಡನೆ ಮಾಡಿರುವ ಬಜೆಟ್ ನಲ್ಲಿ ತೆರಿಗೆ ಇಂಗ್ಲೆಂಡಿನಂತೆ ಇದ್ದರೆ ಸೇವೆ ಮಾತ್ರ ಯುದ್ಧ ಪೀಡಿತ ಸೋಮಲಿಯಾದಲ್ಲಿದ್ದಂತೆ ಇದೆ ಎಂದು ವ್ಯಂಗ್ಯವಾಡಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2014ರಿಂದಲೂ ಸಾರ್ವಜನಿಕರ ಮೇಲೆ ವಿವಿಧ ತೆರಿಗೆಗಳನ್ನು ಹೇರಿಕೊಂಡು ಬಂದಿದ್ದು, ಆದ್ದರಿಂದ ಜನ ತತ್ತರಿಸಿದ್ದಾರೆ ಎಂದು ಹೇಳಿದ ರಾಘವ್ ಚಡ್ಡಾ, ಹಳೆ ಆಸ್ತಿಗಳ ಮಾರಾಟದ ಮೇಲೆ ವಿಧಿಸುವ ತೆರಿಗೆ ಮೇಲಿನ ಹೊಸ ನಿಯಮದಿಂದ ರಿಯಲ್ ಎಸ್ಟೇಟ್ ಉದ್ಯಮ ತತ್ತರಿಸಲಿದೆ. ಹೀಗಾಗಿ ಸರ್ಕಾರ ಇದನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.