ನೀವು ಆನ್ಲೈನ್ನಲ್ಲಿ ಆಹಾರವನ್ನು ಆರ್ಡರ್ ಮಾಡುವವರಾಗಿದ್ದರೆ ನೀವು ಈ ಸುದ್ದಿಯನ್ನು ಓದಲೇಬೇಕು. ಜೊಮ್ಯಾಟೋ, ಸ್ವಿಗ್ಗಿಯಂತಹ ಅಪ್ಲಿಕೇಶನ್ನಿಂದ ಆಹಾರವನ್ನು ಆರ್ಡರ್ ಮಾಡುವ ಗ್ರಾಹಕರಿಗೆ ಕೇಂದ್ರ ಸರ್ಕಾರವು 5 ಪ್ರತಿಶತ ತೆರಿಗೆಯನ್ನು ವಿಧಿಸಿದೆ. ಈ ಹೊಸ ನಿಯಮವು ಮುಂದಿನ ವರ್ಷ ಜನವರಿ 1ರಿಂದ ಜಾರಿಗೆ ಬರಲಿದೆ.
ಕೇಂದ್ರ ಹಣಕಾಸು ಸಚಿವಾಲಯದ ಆದೇಶದ ಪ್ರಕಾರ, ರೆಸ್ಟೋರೆಂಟ್ಗಳಂತೆ ಆ್ಯಪ್ ಕಂಪನಿಗಳು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ನ ಪ್ರಯೋಜನವನ್ನು ಪಡೆಯೋದಿಲ್ಲ. ಆಹಾರ ವಿತರಣಾ ಅಪ್ಲಿಕೇಶನ್ನ್ನು ಜಿಎಸ್ಟಿ ವ್ಯಾಪ್ತಿಗೆ ತರಬೇಕೆಂದು ಬಹಳ ದಿನಗಳಿಂದ ಬೇಡಿಕೆ ಕೇಳಿ ಬರುತ್ತಿತ್ತು. ಸೆಪ್ಟೆಂಬರ್ 17ರಂದು ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಈ ನಿರ್ಧಾರಕ್ಕೆ ಹಸಿರು ನಿಶಾನೆ ತೋರಲಾಗಿದೆ. ಈ ಹೊಸ ವ್ಯವಸ್ಥೆಯು ಜನವರಿ 1ರಿಂದ ದೇಶದಾದ್ಯಂತ ಜಾರಿಗೆ ಬರಲಿದೆ.
ಜನವರಿ 1ರಿಂದ ಆ್ಯಪ್ಗಳ ಮೇಲೆ ಕಾನೂನುಬದ್ಧವಾಗಿ ಶೇಕಡಾ 5ರಷ್ಟು ತೆರಿಗೆಯು ಗ್ರಾಹಕರ ಮೇಲೆ ಪರಿಣಾಮ ಬೀರೋದಿಲ್ಲ. ಏಕೆಂದರೆ ಸರ್ಕಾರವು ಡೆಲಿವರಿ ಆ್ಯಪ್ಗಳಿಂದ ಈ ಟ್ಯಾಕ್ಸ್ನ್ನು ವಸೂಲಿ ಮಾಡುತ್ತದೆ. ಆದರೆ ಈ 5 ಪ್ರತಿಶತ ತೆರಿಗೆಯ ಹೊರೆಯನ್ನು ಡೆಲಿವರಿ ಆ್ಯಪ್ಗಳು ಗ್ರಾಹಕರ ಮೇಲೆ ಹೊರಿಸಲೂಬಹುದು.
ಈ ರೀತಿ ಆದಲ್ಲಿ ಜನವರಿ 1ರಿಂದ ಆನ್ಲೈನ್ನಲ್ಲಿ ಫುಡ್ ಆರ್ಡರ್ ಮಾಡಿದರೆ ನಿಮಗೆ ಬೆಲೆ ಹೆಚ್ಚಾಗಬಹುದು. ಇಲ್ಲಿಯವರೆಗೆ ಆ್ಯಪ್ನಿಂದ ಆಹಾರವನ್ನು ಆರ್ಡರ್ ಮಾಡಲು ರೆಸ್ಟೋರೆಂಟ್ ಗಳು 5 ಪ್ರತಿಶತ ತೆರಿಗೆ ಪಾವತಿಸಬೇಕಿತ್ತು. ಆದರೆ ಅದನ್ನು ತೆಗೆದು ಅಪ್ಲಿಕೇಶನ್ನಲ್ಲಿ ಅಳವಡಿಸಲಾಗಿದೆ.