
SBI ಗ್ರಾಹಕರಿಗೆ ಖುಷಿ ಸುದ್ದಿಯೊಂದಿದೆ. ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದೆ. ಟ್ಯಾಕ್ಸ್ ಸೇವಿಂಗ್ ಫಿಕ್ಸ್ ಡ್ ಡೆಪಾಸಿಟ್ ಮೇಲಿನ ಬಡ್ಡಿ ದರವನ್ನು ಏರಿಸಿದೆ. ತೆರಿಗೆ ಉಳಿತಾಯ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರ ಏರಿಕೆ ಮಾಡಿರುವುದು ಶೂನ್ಯ ಅಪಾಯದಲ್ಲಿ ಲಾಭ ಗಳಿಸಲು ಬಯಸುವ ಹೂಡಿಕೆದಾರರಿಗೆ ಖುಷಿ ನೀಡಿದೆ.
ತೆರಿಗೆ ಉಳಿತಾಯ ಸ್ಥಿರ ಠೇವಣಿ ಯೋಜನೆಯಲ್ಲಿ ಆದಾಯ ತೆರಿಗೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಸಿಗುತ್ತದೆ. ಇದು ಕೇವಲ ಐದು ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿದೆ. ಈ ವಿಶೇಷ ಕೊಡುಗೆ ಲಾಭ ಪಡೆಯಲು ಬಯಸಿದ್ದರೆ ಆನ್ಲೈನ್ ಮೂಲಕ ತೆರಿಗೆ ಉಳಿತಾಯ ಎಫ್ ಡಿ ಖಾತೆ ತೆರೆಯಬಹುದು.
SBI ದೀರ್ಘಾವಧಿಯ ಎಫ್‌ಡಿಗಳ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿದೆ. ಒಂದು ವರ್ಷದಿಂದ 10 ವರ್ಷಗಳ ಎಫ್‌ಡಿಗಳ ಮೇಲೆ ಶೇಕಡಾ 5.10 ರಿಂದ 5.40 ರವರೆಗೆ ಬಡ್ಡಿ ಸಿಗಲಿದೆ. ಎರಡು ವರ್ಷಕ್ಕಿಂತ ಹೆಚ್ಚು ಮತ್ತು ಮೂರು ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿಗಳ ಮೇಲಿನ ಬಡ್ಡಿ ದರವನ್ನು ಶೇಕಡಾ 5.10 ರಿಂದ ಶೇಕಡಾ 5.20 ಕ್ಕೆ ಹೆಚ್ಚಿಸಲಾಗಿದೆ. ಮೂರರಿಂದ ಐದು ವರ್ಷಗಳ ಅವಧಿಗೆ ದರವನ್ನು ಶೇಕಡಾ 5.30ರಿಂದ ಶೇಕಡಾ 5.45ಕ್ಕೆ ಹೆಚ್ಚಿಸಲಾಗಿದೆ.