ಬೆಂಗಳೂರು : ತೆರಿಗೆ ಆದಾಯ ಹಂಚಿಕೆಯಿಂದ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
2021-22ನೇ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯವೊಂದರಿಂದಲೇ ಸುಮಾರು 4.75 ಲಕ್ಷ ಕೋಟಿ ರೂಪಾಯಿ ತೆರಿಗೆ ಮೂಲಕ ಸಂಗ್ರಹಿಸಿದೆ. ಇದರಲ್ಲಿ ನೇರ ತೆರಿಗೆ ರೂ. 2.40 ಲಕ್ಷ ಕೋಟಿ, ಜಿಎಸ್ಟಿ ರೂ. 1.30 ಲಕ್ಷ ಕೋಟಿ ಮತ್ತು ಸೆಸ್ ರೂ. 30,000 ಕೋಟಿ ಸೇರಿದೆ. ಕೇಂದ್ರ ಸರ್ಕಾರ ಕರ್ನಾಟಕದಿಂದ ಸಂಗ್ರಹಿಸಿದ ರೂ. 4.75 ಲಕ್ಷ ಕೋಟಿಯಲ್ಲಿ ರಾಜ್ಯಕ್ಕೆ ತನ್ನ ಪಾಲಿನ ರೂಪದಲ್ಲಿ ಸಿಕ್ಕಿರುವುದು ರೂ. 50,000 ಕೋಟಿ ಮಾತ್ರ. ತೆರಿಗೆ ಆದಾಯ ಹಂಚಿಕೆಯಲ್ಲಿ ನಾಡಿಗೆ ಆದ ಅನ್ಯಾಯದ ಪೂರ್ಣ ಮಾಹಿತಿ ತಿಳಿಯಲು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿರುವ ನನ್ನ ಲೇಖನ ತಪ್ಪದೆ ಓದಿ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.