
ವಾಣಿಜ್ಯ ತೆರಿಗೆಗಳ ಇಲಾಖೆ ಕರ್ನಾಟಕ ವತಿಯಿಂದ ಜಿಎಸ್‌ಟಿ ತೆರಿಗೆದಾರರಿಗೆ ಜಿಎಸ್‌ಟಿ ಕ್ಷಮಾದಾನ ಯೋಜನೆ 2024 ಜಾರಿಗೆ ತರಲಾಗಿದೆ.
ಜಿಎಸ್‌ಟಿ ಕಾಯ್ದೆಯ ಪ್ರಕರಣ 73ರ ಅಡಿಯಲ್ಲಿ ಜಾರಿ ಮಾಡಲಾದ ನೋಟಿಸ್, ಸ್ಟೇಟ್ಮೆಂಟ್, ನ್ಯಾಯ ನಿರ್ಣಯ ಆದೇಶಗಳಿಗೆ ಸಂಬಂಧಿಸಿದಂತೆ 2017-18, 2018 -19 ಮತ್ತು 2019 -20ನೇ ಆರ್ಥಿಕ ವರ್ಷಗಳಿಗೆ ಬಡ್ಡಿ ಮತ್ತು ದಂಡ ಮನ್ನಾ ಮಾಡಲಾಗಿದೆ.
ತೆರಿಗೆ ಪಾವತಿಗೆ ಮಾರ್ಚ್ 31 ಕೊನೆಯ ದಿನವಾಗಿದ್ದು, ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ www.gst.kar.nic.in ಗಮನಿಸುವುದು. ತಮ್ಮ ಸಮೀಪದ ವಾಣಿಜ್ಯ ತೆರಿಗೆ ಕಚೇರಿ ಸಂಪರ್ಕಿಸಬಹುದು. ಈ ಬಗ್ಗೆ ಹೆಚ್ಚಿನ ಅರಿವು ಪಡೆದುಕೊಳ್ಳಲು ವಾಣಿಜ್ಯ ತೆರಿಗೆ ಇಲಾಖೆಯು ಯೂಟ್ಯೂಬ್ ಚಾನೆಲ್ ನಲ್ಲಿ ಹಾಕಿರುವ ವಿಡಿಯೋಗಳನ್ನು ವೀಕ್ಷಿಸಬಹುದು ಎಂದು ವಾಣಿಜ್ಯ ತೆರಿಗೆಗಳ ಇಲಾಖೆ ಮಾಹಿತಿ ನೀಡಿದೆ.