
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ಮೇಘನಾ ರಾಜ್ ಅಭಿನಯಿಸಿರುವ ‘ತತ್ಸಮ ತದ್ಭವ’ ಎಂಬ ಕ್ರೈಂ ಥ್ರಿಲ್ಲರ್ ಕಥಾಧಾರಿತ ಸಿನಿಮಾ ಮುಂದಿನ ತಿಂಗಳು ಸೆಪ್ಟೆಂಬರ್ 15 ರಂದು ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ತೆರೆ ಕಾಣುತ್ತಿದೆ.
ಈ ಕುರಿತು ಮೇಘನಾ ರಾಜ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ”ಚಿತ್ರ ಪ್ರಿಯರಿಗೆ ಒಂದು ವಿಶೇಷ ಕ್ರೈಂ ಥ್ರಿಲ್ಲರ್ ತತ್ಸಮ ತದ್ಭವ. ಟೀಸರ್ ನಿಂದಲೇ ಸಂಚಲನ ಮೂಡಿಸಿರುವ ತತ್ಸಮ ತದ್ಭವ ಸೆಪ್ಟೆಂಬರ್ 15ನೇ ತಾರೀಕು ಬಿಡುಗಡೆಯಾಗಲಿದೆ” ಎಂದು ಬರೆದುಕೊಂಡಿದ್ದಾರೆ.
ವಿಶಾಲ್ ಆತ್ರೇಯ ನಿರ್ದೇಶನದ ಈ ಚಿತ್ರವನ್ನು ಪಿಬಿ ಸ್ಟುಡಿಯೋಸ್ ಪ್ರೊಡಕ್ಷನ್ ಬ್ಯಾನರ್ ನಡಿ ಪನ್ನಗ ಭರಣ, ಚೇತನ್ ನಂಜುಂಡಯ್ಯ ಹಾಗೂ ಸ್ಪೂರ್ತಿ ಅನಿಲ್ ಬಂಡವಾಳ ಹೂಡಿದ್ದು, ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಿರಿಯ ನಟಿ ಶೃತಿ ಸೇರಿದಂತೆ ಅರವಿಂದ್ ಅಯ್ಯರ್, ವೈಷ್ಣವಿ ಭಟ್ ಬಣ್ಣ ಹಚ್ಚಿದ್ದಾರೆ.
