ಟಾಟಾ ಮೋಟರ್ಸ್ನ ಟೈಗೋರ್ ಸೆಡಾನ್ ಕಾರಿನ ಎಲೆಕ್ಟ್ರಿಕ್ ಅವತರಣಿಕೆಯನ್ನು ಆಗಸ್ಟ್ 18 (ಬುಧವಾರ) ಅನಾವರಣ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.
ಪ್ರಯಾಣಿಕ ವಾಹನಗಳ ವಿಭಾಗದಲ್ಲಿ ಟಾಟಾ ಮೋಟರ್ಸ್ ಬಿಡುಗಡೆ ಮಾಡುತ್ತಿರುವ ಎರಡನೇ ಇವಿ ವಾಹನ ಆಗಿರುವ ಟೈಗೋರ್, ಇದಕ್ಕೂ ಮುನ್ನ ಟೈಗೋರ್ ಜೊತೆಯಲ್ಲಿ ನೆಕ್ಸಾನ್ ಇವಿಯ ವಿಚಾರವನ್ನು ಹೊರಹಾಕಿತ್ತು.
ಟಾಟಾ ಮೋಟರ್ಸ್ನ ಪೇಟೆಂಟೆಡ್ ಕೋರ್ ಆದ ಜ಼ಿಪ್ಟ್ರಾನ್ ಅನ್ನು ನೆಕ್ಸಾನ್ ಇವಿಯಲ್ಲಿ ಬಳಸಲಾಗಿದ್ದು, ಈ ಸೆಗ್ಮೆಂಟ್ನಲ್ಲಿರುವ ಮಿಕ್ಕೆಲ್ಲಾ ಇವಿ ಕಾರುಗಳನ್ನು ಹಿಂದಿಕ್ಕಿದೆ.
ಇವಿ ಮಾರುಕಟ್ಟೆಗೆ ಬರುತ್ತಿರುವ ಮೊದಲ ಸೆಡಾನ್ ಆಗಿರುವ ಟೈಗೋರ್ನ ಗುಣಲಕ್ಷಣಗಳನ್ನು ಟಾಟಾ ಬುಧವಾರ ಬಹಿರಂಗಪಡಿಸಲಿದೆ.