ರಾಷ್ಟ್ರೀಯ ವಿಮಾನಯಾನ ಸೇವಾದಾರ ಏರ್ ಇಂಡಿಯಾ ಸ್ವಾಧೀನ ಪ್ರಕ್ರಿಯೆಯ ಮೊದಲ ಹಂತವಾಗಿ, ಟಾಟಾ ಸಮೂಹವು ಗುರುವಾರ ಮುಂಬೈನಿಂದ ಕಾರ್ಯಚರಿಸುವ ನಾಲ್ಕು ವಿಮಾನಗಳಲ್ಲಿ “ವಿಶೇಷ ಊಟ ಸೇವೆ” ಯನ್ನು ಪರಿಚಯಿಸಿದ್ದಾರೆ.
ಕೇಂದ್ರ ಸರ್ಕಾರ ಈ ವಾರದ ಆರಂಭದಲ್ಲಿ, ಜನವರಿ 27 ರಂದು ಹೂಡಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಗುರಿ ಹೊಂದಿರುವುದಾಗಿ ಹೇಳಿತ್ತು.
ಏರ್ ಇಂಡಿಯಾ ವಿಮಾನಗಳು ಈಗಲೇ ಟಾಟಾ ಬ್ಯಾನರ್ ಅಡಿಯಲ್ಲಿ ಹಾರುವುದಿಲ್ಲ, ಆದರೂ ಸಹ ಆಟೋಮೊಬೈಲ್‌ನಿಂದ-ಉಕ್ಕಿನವರೆಗೂ ಸರ್ವವ್ಯಾಪಿಯಾಗಿರುವ ಸಮೂಹಕ್ಕೆ ಸುಮಾರು 70 ವರ್ಷಗಳ ನಂತರ ದೇಶದ ಪ್ರೀಮಿಯರ್ ಏರ್‌ಲೈನ್ ಹಸ್ತಾಂತರಿಸುವ ಘೋಷಣೆ ಆಧುನಿಕ ಭಾರತದ ಇತಿಹಾಸದಲ್ಲಿ ಒಂದು ಪ್ರಮುಖ ಘಟನೆಯಾಗಿದೆ.
ಈ ವಿಶೇಷ ಊಟ ಸೇವೆಯನ್ನು ನಾಲ್ಕು ವಿಮಾನಗಳಲ್ಲಿ ಒದಗಿಸಲಾಗುವುದು – AI864 (ಮುಂಬೈ-ದೆಹಲಿ), AI687 (ಮುಂಬೈ-ದೆಹಲಿ), AI945 (ಮುಂಬೈ-ಅಬುಧಾಬಿ) ಮತ್ತು AI639 (ಮುಂಬೈ-ಬೆಂಗಳೂರು) – ಎಂದು ನಿಗದಿಪಡಿಸಲಾಗಿದೆ.
ಇದನ್ನು ಶುಕ್ರವಾರದಂದು AI191 (ಮುಂಬೈ-ನೆವಾರ್ಕ್) ಮತ್ತು ಐದು ಮುಂಬೈ-ದೆಹಲಿ ವಿಮಾನಗಳಲ್ಲಿ ಪ್ರಯಾಣಿಕರಿಗೆ ಈ ಸೇವೆ ಸಲ್ಲಿಸಲಾಗುವುದು ಮತ್ತು ಹಂತಹಂತವಾಗಿ ಹೆಚ್ಚಿನ ವಿಮಾನಗಳಿಗೆ ವಿಸ್ತರಿಸಲಾಗುವುದು.
ಏತನ್ಮಧ್ಯೆ, ಏರ್ ಇಂಡಿಯಾದ ಹಸ್ತಾಂತರ ಪ್ರಕ್ರಿಯೆ ಇಂದು, ಗುರುವಾರ, ನಡೆಯುವ ನಿರೀಕ್ಷೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯ ನಂತರ, ಕೇಂದ್ರ ಸರ್ಕಾರವು ಕಳೆದ ವರ್ಷದ ಅಕ್ಟೋಬರ್ 8 ರಂದು ₹18,000 ಕೋಟಿಗೆ ಏರ್ ಇಂಡಿಯಾವನ್ನು ಟಾಟಾ ಸಮೂಹದ ಅಂಗಸಂಸ್ಥೆಯಾದ ಟಾಲೇಸ್ ಪ್ರೈವೇಟ್ ಲಿಮಿಟೆಡ್‌ಗೆ ಮಾರಾಟ ಮಾಡಿತ್ತು.
1953 ರಲ್ಲಿ ಸರ್ಕಾರವು ವೈಮಾನಿಕ ಕ್ಷೇತ್ರವನ್ನು ರಾಷ್ಟ್ರೀಕರಣಗೊಳಿಸುವ ಮೊದಲು, 90 ವರ್ಷಗಳ ಹಿಂದೆಯೇ ನಮ್ಮ ರಾಷ್ಟ್ರೀಯ ವಾಹಕವು ಟಾಟಾಗಳ ಅಡಿಯಲ್ಲಿ ತನ್ನ ಹಾರಾಟ ಪ್ರಾರಂಭಿಸಿತ್ತು.
2003-04ರ ನಂತರ ವಿಮಾನಯಾನ ಸಂಸ್ಥೆಯೊಂದರ ಮೊದಲ ಖಾಸಗೀಕರಣ ಇದಾಗಿದೆ.
ಇದೇ ಅವಧಿಯಲ್ಲಿ, ಏರ್ ಇಂಡಿಯಾ ಸ್ವಾಧೀನದೊಂದಿಗೆ, ಟಾಟಾ ಸಮೂಹದ ಅಡಿಯಲ್ಲಿ ಮೂರು ಏರ್‌ಲೈನ್ ಬ್ರಾಂಡ್‌ಗಳು ಇದ್ದಂತಾಗಿದೆ. ತನ್ಮೂಲಕ ದೇಶೀ ವಿಮಾನಯಾನ ಮಾರುಕಟ್ಟೆಯಲ್ಲಿ ಟಾಟಾ ಪ್ರಬಲ ಆಟಗಾರನಾಗಲಿದೆ.
ಸಿಂಗಾಪುರ್ ಏರ್‌ಲೈನ್ಸ್ ಲಿಮಿಟೆಡ್‌ನ ಜಂಟಿ ಉದ್ಯಮವಾದ ಏರ್‌ಏಷಿಯಾ ಇಂಡಿಯಾ ಮತ್ತು ವಿಸ್ತಾರಾದಲ್ಲಿ ಟಾಟಾ ಸಮೂಹ ಈಗಾಗಲೇ ಹೆಚ್ಚಿನ ಪಾಲುಗಳನ್ನು ಹೊಂದಿದೆ.