ಇತ್ತೀಚಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಓಟ ಕಾಣುತ್ತಿರುವ ಟಾಟಾ ಮೋಟರ್ಸ್ ಡಿಸೆಂಬರ್ 2021ರ ಸೇಲ್ಸ್ ಪಟ್ಟಿಯಲ್ಲಿ ದಕ್ಷಿಣ ಕೊರಿಯಾದ ಆಟೋ ದಿಗ್ಗಜ ಹ್ಯೂಂಡಾಯ್‌ಯನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಜಿಗಿದಿದೆ.
ಮಧ್ಯಮ ಶ್ರೇಣಿಯ ಎಸ್‌ಯುವಿ ವರ್ಗದಲ್ಲಿ ಹ್ಯೂಂಡಾಯ್‌ನ ಕ್ರೆಟಾ ಮತ್ತು ಕಿಯಾದ ಸೆಲ್ಟೋಸ್‌ಗೆ ಪ್ರತಿಸ್ಫರ್ಧಿಯಾಗಿ ’ಬ್ಲಾಕ್‌ಬರ್ಡ್’ ಕೋಡ್ ನಾಮಾಂಕಿತ ಮಾಡೆಲ್ ಅನ್ನು ಅಭಿವೃದ್ಧಿಪಡಿಸಲಿದ್ದು ಶೀಘ್ರವೇ ಲಾಂಚ್ ಮಾಡುವ ನಿರೀಕ್ಷೆ ಇದೆ.
ಶೇರುಗಳ ಮರು ಖರೀದಿಗೆ ಮುಂದಾದ ಟಿಸಿಎಸ್
ತನ್ನದೇ ಫ್ಲಾಗ್‌ಶಿಪ್‌ನ ಹ್ಯಾರಿಯರ್ ಮತ್ತು ನೆಕ್ಸಾನ್‌ಗಳ ಮಾರಾಟ ಡಲ್ ಆಗಿದ್ದ ಕಾರಣ ’ಬ್ಲಾಕ್‌ಬರ್ಡ್’ನ ಬಿಡುಗಡೆಯನ್ನು ಟಾಟಾ ಕೊಂಚ ನಿಧಾನ ಮಾಡಿತ್ತು. ಆದರೆ ಇತ್ತೀಚೆಗೆ ತನ್ನ ಪಂಚ್ ಮತ್ತು ನೆಕ್ಸಾನ್‌ಗಳ ಮಾರಾಟದಲ್ಲಿ ಉತ್ತಮ ಓಟ ಕಂಡು ಬಂದಿದ್ದು, ಎಸ್‌ಯುವಿಗಳ ಮೇಲೆ ದೇಶೀಗಳಲ್ಲಿ ಟ್ರೆಂಡ್ ಸೃಷ್ಟಿಯಾಗಿದೆ.
ನೆಕ್ಸಾನ್‌ನ ಎಕ್ಸ್1 ಪ್ಲಾಟ್‌ಫಾರಂನಲ್ಲೇ ಅಭಿವೃದ್ಧಿಪಡಿಸಿರುವ ನಿರೀಕ್ಷೆ ಇರುವ ಬ್ಲಾಕ್‌ಬರ್ಡ್, ಸೆಲ್ಟೋಸ್ ಮತ್ತು ಕ್ರೆಟಾದಷ್ಟೇ ಗಾತ್ರದ್ದಾಗಿರುವ ಸಾಧ್ಯತೆ ಇದೆ. 1.5 ಲೀಟರ್ ಟರ್ಬೋಚಾರ್ಜ್ ಆಗಿರುವ, 4-ಸಿಲಿಂಡರ್ ಇಂಜಿನ್‌ನಿಂದ ಈ ಎಸ್‌ಯುವಿ ಶಕ್ತಿ ಪಡೆಯಲಿದೆ. ಇಂಜಿನ್‌ನ ಡೀಸೆಲ್ ರೂಪಾಂತರವೂ ಬರುವ ಸಾಧ್ಯತೆ ಇದೆ.
ಎಸ್‌ಯುವಿಯಲ್ಲಿ ನಿರೀಕ್ಷಿಸಬಹುದಾದ ಸನ್‌ರೂಫ್, ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜಿಂಗ್ ಸೇರಿದಂತೆ ಅನೇಕ ಫೀಚರ್‌ಗಳನ್ನು ಬ್ಲಾಕ್‌ಬರ್ಡ್ ಸಹ ಹೊಂದಲಿದೆ.