ದೇಶದಲ್ಲಿ ಸದ್ಯದ ಮಟ್ಟಿಗೆ ಎಲೆಕ್ಟ್ರಿಕ್ ಕಾರುಗಳ (ಇವಿ) ತಯಾರಿಕೆಯಲ್ಲಿ ಟಾಟಾ ಮೋಟಾರ್ಸ್ ನಂ.1 ಸ್ಥಾನದಲ್ಲಿದೆ. ತನ್ನ ಪೆಟ್ರೋಲ್ ಚಾಲಿತ ಕಾರುಗಳನ್ನು ಬಹಳ ಪರಿಣಾಮಕಾರಿಯಾಗಿ ಮತ್ತು ಅಚ್ಚುಕಟ್ಟಾಗಿ ಎಲೆಕ್ಟ್ರಿಕ್ ಕಾರುಗಳಾಗಿ ಮಾರ್ಪಡಿಸಿ ಮಾರುಕಟ್ಟೆಗೆ ಪರಿಚಯಿಸಿದ ಕಂಪನಿಯು ಜನರ ವಿಶ್ವಾಸ ಗಿಟ್ಟಿಸಿದೆ.
ಟಿಗಾರ್ ಇವಿ, ನೆಕ್ಸಾನ್ ಇವಿ ಮಾಡೆಲ್ ಗಳು ಜನರ ಮನಗೆದ್ದು , ರಸ್ತೆಗಳಲ್ಲಿ ಬೀಗುತ್ತಿವೆ. ಈ ನಡುವೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ) ಚಾಲಿತ ಕಾರುಗಳನ್ನು ಪರಿಚಯಿಸಲು ಟಾಟಾ ಮೋಟಾರ್ಸ್ ಮುಂದಾಗಿದೆ.
ಸದ್ಯಕ್ಕೆ ದೇಶಾದ್ಯಂತ ಸಿಎನ್‌ಜಿ ಚಾಲಿತ ಆಟೋಗಳು ಹೆಚ್ಚಿನ ಸಂಖ್ಯೆಯಲ್ಲಿವೆ.
ಅಫ್ಘಾನಿಸ್ತಾನ ಜನತೆಗೆ ನೆರವಿನ ಹಸ್ತ ಚಾಚಿದ ಭಾರತ
ತನ್ನ ಜನಪ್ರಿಯ ಸಣ್ಣ ಕಾರಿನ ಮಾಡೆಲ್ ಟಿಯಾಗೊಗೆ ಸಿಎನ್‌ಜಿ ಅಳವಡಿಸಿ, ಟಿಗಾರ್ ಎಂಬ ಸಣ್ಣ ಸಿಡಾನ್ ಮಾಡೆಲ್‌ಗೂ ಸಿಎನ್‌ಜಿ ಅಳವಡಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಜನವರಿ 19ರಂದು ಅವುಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಸದ್ಯಕ್ಕೆ ಈ ಕಾರುಗಳ ಬುಕ್ಕಿಂಗ್ ಕೂಡ ಆರಂಭವಾಗಿದೆ.
1.2 ಲೀಟರ್ ಸಾಮರ್ಥ್ಯದ ಎಂಜಿನ್ ಹೊಂದಿರುವ ಸಿಎನ್‌ಜಿ ಚಾಲಿತ ಮಾಡೆಲ್‌ಗಳು ಐದು ಗೇರುಗಳಲ್ಲಿ ಚಲನೆ ಹೊಂದಿರಲಿವೆ. ಉತ್ತಮ ಮೈಲೇಜ್ ನೀಡುವ ಸಿಎನ್‌ಜಿ ಬಳಕೆಯಿಂದ ಪೆಟ್ರೋಲ್ ಬಳಕೆಯಿಂದ ತತ್ತರಿಸಿರುವ ಕಾರು ಮಾಲೀಕರ ಮುಖದಲ್ಲಿ ಮಂದಹಾಸ ಮೂಡಿಸಲು ದೇಶದ ಅತ್ಯಂತ ಹಳೆಯ ಮತ್ತು ವಿಶ್ವಾಸಾರ್ಹ ಆಟೋಮೊಬೈಕ್ ಕಂಪನಿ ಟಾಟಾ ಮೋಟಾರ್ಸ್ ಯತ್ನಿಸುತ್ತಿದೆ.
ಅಂದಹಾಗೆ, ಸದ್ಯಕ್ಕೆ ಟಾಟಾದ ಸಿಎನ್‌ಜಿ ಕಾರುಗಳಿಗೆ ಮಾರುಕಟ್ಟೆಯಲ್ಲಿ ಪ್ರಬಲ ಪೈಪೋಟಿ ಎಂದರೆ ಕೊರಿಯಾ ಕಂಪನಿ ಹುಂಡೈನ ಆರಾ ಸಿಎನ್‌ಜಿ ಮಾಡೆಲ್ ಕಾರು. ಮಾರುತಿ ಸುಜುಕಿ ಕೂಡ ತನ್ನ ಡಿಜೈರ್ ಮಾಡೆಲ್ ಕಾರಿಗೆ ಸಿಎನ್‌ಜಿ ಅಳವಡಿಸಿ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಮಾರುತಿಯ ವ್ಯಾಗನಾರ್ ಸಿಎನ್‌ಜಿ ಮಾಡೆಲ್ ದಿಲ್ಲಿಯಲ್ಲಿ ಬಹಳ ಜನಪ್ರಿಯವಾಗಿದೆ.