ಮಿನಿ ಎಸ್ಯುವಿ ಕ್ಷೇತ್ರಕ್ಕೆ ಕಾಲಿಡುತ್ತಿರುವ ಟಾಟಾ ಮೋಟರ್ಸ್ ತನ್ನ ಪಂಚ್ ಕಾರನ್ನು ಅಕ್ಟೋಬರ್ 4 ರ ಇಂದು ಬಿಡುಗಡೆ ಮಾಡಲಿದೆ. ಸಮಾರಂಭವೊಂದರ ಮೂಲಕ ಎಸ್ಯುವಿಯನ್ನು ಬಿಡುಗಡೆ ಮಾಡಲಿದ್ದು, ಆಸಕ್ತರು ಕಂಪನಿಯ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ.
ಒಂದು ರೂಪಾಯಿಯ ಈ ನೋಟು ನಿಮ್ಮ ಬಳಿ ಇದ್ದರೆ ಸಿಗುತ್ತೆ 45,000 ರೂ.
ಅಕ್ಟೋಬರ್ 4ರಿಂದಲೇ ಕಾರಿನ ಮುಂಗಡ ಬುಕಿಂಗ್ ಆರಂಭವಾಗಲಿದೆ. ಕಾರಿನ ಬಿಡುಗಡೆಗೂ ಮುನ್ನ ಕಂಪನಿಯು ಟೀಸರ್ ಬಿಡುಗಡೆ ಮಾಡಿದ್ದು, ಮಳೆಯ ಸಾಧ್ಯತೆ ಗ್ರಹಿಸುವ ವೈಪರ್ಗಳನ್ನು ಈ ಸೆಗ್ಮೆಂಟ್ನಲ್ಲಿ ಮೊದಲ ಬಾರಿಗೆ ಪರಿಚಯಿಸುವ ಸುಳಿವು ಕೊಟ್ಟಿದೆ.
ದಂಪತಿ, ಮಕ್ಕಳ ರೋಮಾಂಚಕ ‘ಮೊಬೈಲ್ ಹೋಮ್’ ಪ್ರಯಾಣ
ಎಲ್ಇಡಿ ಡಿಆರ್ಎಲ್ಗಳು, ಹಿಂಬದಿ ದೀಪಗಳು, ದೊಡ್ಡ ಬಂಪರ್, ಅಂಡರ್ಬಾಡಿ ಹಾಗೂ ಸೈಡ್ ಕ್ಲಾಡಿಂಗ್, ಫಾಕ್ಸ್ ರೂಫ್ ರೇಲ್ಗಳು, ಆಕರ್ಷಕ ಬಹುಲೋಹೀಯ ಚಕ್ರಗಳು ಸೇರಿದಂತೆ ಅನೇಕ ವಿಶಿಷ್ಟ ಫೀಚರ್ಗಳನ್ನು ಟಾಟಾ ಪಂಚ್ ಹೊಂದಲಿದೆ.
ಕಾರು ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರ ಪರಿಚಯವಾಗುತ್ತಿದ್ದು, ಹೊಸತನಗಳಿಂದಲೇ ಕಂಪೆನಿಗಳು ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸುವ ಪ್ರಯತ್ನ ನಡೆಸಿವೆ.