ಎಲೆಕ್ಟ್ರಿಕ್ ವಾಹನಗಳ ಟ್ರೆಂಡ್ ಏರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಟಾಟಾ, ದೆಹಲಿಯ ಬೀದಿಗಳಲ್ಲಿ ಇವಿ ವಾಹನಗಳಿಗೆ 1400 ಚಾರ್ಜಿಂಗ್ ಪಾಯಿಂಟ್‌ಗಳನ್ನು ಅಳವಡಿಸಿದೆ.
ದಿ ಟಾಟಾ ಪವರ್ ದೆಹಲಿ ಡಿಸ್ಟ್ರಿಬ್ಯೂಷನ್ (ಟಿಪಿಡಿಡಿಎಲ್) ಈ ಸಂಬಂಧ ಉತ್ತರ ದೆಹಲಿ ಪಾಲಿಕೆಯೊಂದಿಗೆ ಕೆಲಸ ಮಾಡುತ್ತಿದ್ದು, ಪಾರ್ಕಿಂಗ್ ಸ್ಲಾಟ್‌ಗಳಲ್ಲಿ ಮುಂದಿನ ಐದು ತಿಂಗಳ ಅವಧಿಯೊಳಗೆ ಇನ್ನೂ 50 ಚಾರ್ಜಿಂಗ್ ಸ್ಲಾಟ್‌ಗಳನ್ನು ಅಳವಡಿಸಲು ಪ್ಲಾನ್ ಮಾಡುತ್ತಿದೆ.
“ನಾವು ಅದಗಲೇ 50 ಸಾರ್ವಜನಿಕ ಇವಿ ಮತ್ತು 1400 ಗೃಹ ಚಾರ್ಜರ್‌ಗಳನ್ನು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಅಳವಡಿಸಿದ್ದೇವೆ. ನಾವೀಗ ನಿವಾಸಿಗಳ ಕಲ್ಯಾಣ ಸಂಘಟನೆಗಳತ್ತ ನೋಡುತ್ತಿದ್ದು ಪ್ರತಿಯೊಂದು ವಸತಿ ಸಂಘಟನೆಯಲ್ಲೂ 2-3 ಚಾರ್ಜಿಂಗ್ ಸ್ಟೇಷನ್‌ಗಳ ಅಳವಡಿಕೆಗೆ ರೂಪುರೇಷೆ ಸಿದ್ಧಪಡಿಸುತ್ತಿದ್ದೇವೆ,” ಎಂದು ಟಿಪಿಡಿಡಿಎಲ್ ಕಾರ್ಯನಿರ್ವಾಹಕ ಅಧಿಕಾರಿ ಗಣೇಶ್ ಶ್ರೀನಿವಾಸನ್ ತಿಳಿಸಿದ್ದಾರೆ.
ಹೈಟೆಕ್ ಮುನ್ನಾಭಾಯ್…! ಸಿಕ್ಕಿಬಿದ್ದ ಬ್ಲೂಟೂತ್ ಸೆಟಪ್ ನೊಂದಿಗೆ ವಿಗ್ ಧರಿಸಿ ಬಂದ ಪರೀಕ್ಷಾರ್ಥಿ, ವಿಡಿಯೋ ವೈರಲ್
ಉತ್ತರ ಮತ್ತು ವಾಯುವ್ಯ ದೆಹಲಿ ಪ್ರದೇಶಗಳಲ್ಲಿ ವಿದ್ಯುತ್ ಪೂರೈಸುವ ಟಾಟಾ ಡಿಸ್ಕಾಂ, ಸಾರ್ವಜನಿಕ ಮತ್ತು ಖಾಸಗಿ ಇವಿ ಚಾರ್ಜಿಂಗ್ ಮೂಲಸೌಕರ್ಯಗಳನ್ನು ಒದಗಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಸಾರ್ವಜನಿಕ ಇವಿ ಚಾರ್ಜಿಂಗ್‌ಗಾಗಿ, ಟಿಪಿಡಿಡಿಲ್ ತನ್ನ ಜಮೀನನ್ನು ಗುತ್ತಿಗೆ ಆಧಾರದಲ್ಲಿ ನೀಡುತ್ತಿದೆ.
ಇದೇ ವೇಳೆ ಬ್ಯಾಟರಿ ಬದಲಾವಣೆ ನಿಲ್ದಾಣಗಳ ಅಳವಡಿಕೆಗೂ ಟಾಟಾ ಸಿದ್ಧತೆ ಮಾಡಿಕೊಳ್ಳುತ್ತಿದೆ.