ಡೈರೆಕ್ಟ್-ಟು-ಹೋಮ್ (ಡಿಟಿಎಚ್) ಕಂಪನಿ ಟಾಟಾ ಪ್ಲೇ ತನ್ನ ಟಾಟಾ ಪ್ಲೇ ಡಿಟಿಎಚ್ ಮತ್ತು ಟಾಟಾ ಪ್ಲೇ ಬಿಂಜ್ ಗ್ರಾಹಕರಿಗೆ ಕೊಡುಗೆಗಳನ್ನು ಹೆಚ್ಚಿಸಲು ಅಮೆಜಾನ್ ಪ್ರೈಮ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದು ಪ್ರೈಮ್ ವೀಡಿಯೊದ ಕಂಟೆಂಟ್, ಶಿಪ್ಪಿಂಗ್ ಮತ್ತು ಗ್ರಾಹಕರಿಗೆ ಶಾಪಿಂಗ್ ಕೊಡುಗೆಗಳನ್ನು ಒಳಗೊಂಡಿದೆ.
ಈ ಸಹಯೋಗದೊಂದಿಗೆ, ಟಾಟಾ ಪ್ಲೇ ತನ್ನ ಡಿಟಿಎಚ್ ಮತ್ತು ಬಿಂಜ್ ಪ್ಯಾಕ್‌ಗಳ ಮೂಲಕ ಪ್ರೈಮ್ ಲೈಟ್ ಚಂದಾದಾರಿಕೆ ಪ್ಯಾಕೇಜ್‌ಗಳನ್ನು ನೀಡುತ್ತದೆ.
ಈ ಚಂದಾದಾರಿಕೆ ಪ್ಯಾಕೇಜ್‌ಗಳು ಪ್ರೈಮ್ ವೀಡಿಯೊದ ಕಂಟೆಂಟ್ ಗೆ ಪ್ರವೇಶವನ್ನು ಸಕ್ರಿಯಗೊಳಿಸುತ್ತವೆ ಮತ್ತು ಅಮೆಜಾನ್ ಖರೀದಿಗಳಲ್ಲಿ ಉಚಿತ ಅದೇ ದಿನ ಮತ್ತು ಮರುದಿನ ವಿತರಣೆಯಂತಹ ಪ್ರಯೋಜನಗಳನ್ನು ಸಕ್ರಿಯಗೊಳಿಸುತ್ತವೆ.
“ಒಂದೆಡೆ, ಟಾಟಾ ಪ್ಲೇನ ಕಂಟೆಂಟ್ ವಿತರಣಾ ಜಾಲವು ಅಮೆಜಾನ್ ಪ್ರೈಮ್‌ನ ವ್ಯಾಪ್ತಿಯನ್ನು ಹೊಸ ಪ್ರೇಕ್ಷಕರ ವಿಭಾಗಗಳಿಗೆ ವಿಸ್ತರಿಸಲು ಸಹಾಯ ಮಾಡುತ್ತದೆ. ಮತ್ತೊಂದೆಡೆ ಟಾಟಾ ಪ್ಲೇ ಜೊತೆಗೆ ಪ್ರೈಮ್ ಲೈಟ್ ಸದಸ್ಯತ್ವದ ಸೇರ್ಪಡೆಯು ಬಿಂಜ್ ಅನ್ನು ಹೆಚ್ಚು ಬಲವಾದ ಪ್ರತಿಪಾದನೆಯನ್ನಾಗಿ ಮಾಡುತ್ತದೆ” ಎಂದು ಟಾಟಾ ಪ್ಲೇನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹರಿತ್ ನಾಗ್ಪಾಲ್ ಹೇಳಿದರು.
ಟಾಟಾ ಪ್ಲೇ ಬಿಂಜ್ , ಟಾಟಾ ಪ್ಲೇ ( ಈ ಮುನ್ನ ಟಾಟಾ ಸ್ಕೈ) ನದ ಓಟಿಟಿ ಅಪ್ಲಿಕೇಶನ್ ಆಗಿದ್ದು, ಇದು ಕಂಪನಿಯ ವೆಬ್‌ಸೈಟ್‌ನ ಪ್ರಕಾರ ಅಮೆಜಾನ್ ಪ್ರೈಂ ವಿಡಿಯೋ, ಡಿಸ್ನಿ ಪ್ಲಸ್ ಹಾಟ್ ಸ್ಟಾರ್, ಝೀ 5, ಲಯನ್ಸ್ ಗೇಟ್ ಪ್ಲೇ ಮತ್ತು ಇನ್ನೂ ಹೆಚ್ಚಿನ 22 ಓಟಿಟಿ ಅಪ್ಲಿಕೇಶನ್‌ಗಳಿಂದ ಕಂಟೆಂಟ್ ಪಡೆಯುತ್ತದೆ.
ಟಾಟಾ ಪ್ಲೇ ಡಿಟಿಹೆಟ್ ಪ್ಯಾಕೇಜ್‌ಗಳು ತಿಂಗಳಿಗೆ ₹199 ರಿಂದ ಪ್ರಾರಂಭವಾಗುತ್ತವೆ. ಹೊಸ ವಿಧಾನದಲ್ಲಿ ಈಗ ಬಿಂಜ್ ಚಂದಾದಾರರಿಗೆ ತಿಂಗಳಿಗೆ 33 ಅಪ್ಲಿಕೇಷನ್ ನಲ್ಲಿ 6 ಓಟಿಟಿ ಸೇವೆಗಳನ್ನು ₹199 ರೂಪಾಯಿಯಲ್ಲಿ ಅಥವಾ ಎಲ್ಲಾ 33 ಓಟಿಟಿ ಸೇವೆಗಳನ್ನು ಮಾಸಿಕ ₹349 ಗೆ ಪಡೆಯುವ ಆಯ್ಕೆಯನ್ನು ನೀಡುತ್ತಿದೆ.
ಬಿಂಜ್ 1 ಮಿಲಿಯನ್ ಚಂದಾದಾರರನ್ನು ಹೊಂದುವ ಗುರಿ ಹೊಂದಿದ್ದು ಹೆಚ್ಚಿನ ಜನಪ್ರಿಯ ಅಪ್ಲಿಕೇಶನ್‌ಗಳನ್ನು ತನ್ನಲ್ಲಿ ಸೇರಿಸಿಕೊಳ್ಳುವ ಮೂಲಕ ವ್ಯವಹಾರವನ್ನು ವಿಸ್ತೃತಗೊಳಿಸಲು ಮುಂದಾಗಿದೆ.