ಭಾರತೀಯ ವಾಯುಯಾನದ ದೈತ್ಯ ಸಂಸ್ಥೆ ಏರ್ ಇಂಡಿಯಾವನ್ನು ತನ್ನ ಸ್ವಾಧೀನಕ್ಕೆ ಪಡೆದುಕೊಂಡ ಬಳಿಕ ಟಾಟಾ ಸಮೂಹ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ.
ಸಂಸ್ಥೆಯಲ್ಲಿ ಶಿಸ್ತು ತರುವುದರ ಜೊತೆಗೆ ನಿಗದಿಪಡಿಸಿದ ಸಮಯದಲ್ಲಿಯೇ ವಿಮಾನಗಳ ಹಾರಾಟವನ್ನು ನಡೆಸಲು ಸಮಯ ಪಾಲನೆ ಮಾಡಲಾಗುತ್ತಿದೆ. ಇದರ ಜೊತೆಗೆ ಮತ್ತೊಂದು ಮಹತ್ವದ ತೀರ್ಮಾನವನ್ನು ಟಾಟಾ ಸಮೂಹ ಕೈಗೊಂಡಿದೆ.
ಏರ್ ಇಂಡಿಯಾದ ಹೊಸ ಲೋಗೋವನ್ನು ಗುರುವಾರದಂದು ಅನಾವರಣಗೊಳಿಸಲಾಗಿದ್ದು, ‘ಮಹಾರಾಜ’ ಲಾಂಛನಕ್ಕೆ ಆಧುನಿಕ ರೂಪ ನೀಡಲಾಗಿದೆ. ಅಲ್ಲದೆ ಕೆಂಪು, ಬಿಳಿ ಮತ್ತು ನೇರಳೆ ಬಣ್ಣಗಳ ಸಂಯೋಜನೆಯನ್ನು ಹೊಂದಿದೆ.