ಟಾಟಾ ಮೋಟಾರ್ಸ್‌ನ ನೆಕ್ಸಾನ್ ಕಳೆದ ತಿಂಗಳಲ್ಲಿ ಭಾರತದಲ್ಲಿ ಹೆಚ್ಚು ಮಾರಾಟವಾದ ಎಸ್‌ಯುವಿ ಎನಿಸಿಕೊಂಡಿದ್ದು, ಇದು ಭಾರತದ ಮೊದಲ ಜಿಎನ್‌ಕ್ಯಾಪ್ 5-ಸ್ಟಾರ್ ಕಾಂಪ್ಯಾಕ್ಟ್ ಎಸ್‌ಯುವಿ ಆಗಿದೆ.
ಗಾತ್ರದಲ್ಲಿ ಸಣ್ಣದಾಗಿದ್ದು ಮತ್ತು ಎಸ್.ಯು.ವಿ. ಶೈಲಿಯ ವಿನ್ಯಾಸದಿಂದಾಗಿ ಭಾರತೀಯ ಖರೀದಿದಾರರಲ್ಲಿ ಬಹಳ ಜನಪ್ರಿಯವಾಗಿದೆ. ಈ ಆರ್ಥಿಕ ವರ್ಷದಲ್ಲಿ ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಮಹೀಂದ್ರಾ, ಹ್ಯುಂಡೈ ಮತ್ತು ಕಿಯಾ ಸೇರಿದಂತೆ ಪ್ರಮುಖ ವಾಹನ ತಯಾರಕರು ಈ ವಿಭಾಗದಲ್ಲಿ ವಾಹನ ನೀಡುತ್ತಾರೆ. ಮಾರ್ಚ್ 2022ರಲ್ಲಿ, ಟಾಟಾ ನೆಕ್ಸಾನ್ ಈ ವಿಭಾಗದಲ್ಲಿ ಅತ್ಯಂತ ಜನಪ್ರಿಯ ಸಬ್-ಕಾಂಪ್ಯಾಕ್ಟ್ ರಸ್ ಯುವಿ ಆಗಿ ಹೊರಹೊಮ್ಮಿದೆ.
ರಾಜ್ಯದ ಜನತೆಗೆ ಮತ್ತೊಂದು ಶಾಕ್; ಖಾಸಗಿ ಬಸ್ ಟಿಕೆಟ್, ಟ್ಯಾಕ್ಸಿ ಬಾಡಿಗೆ ಹೆಚ್ಚಳಕ್ಕೆ ನಿರ್ಧಾರ
2022ರ ಮಾರ್ಚ್‌ನಲ್ಲಿ ಟಾಟಾ ನೆಕ್ಸಾನ್ 14,315 ಯುನಿಟ್‌ಗಳನ್ನು ಮಾರಾಟ ಮಾಡಿದೆ, ಹಿಂದಿನ ವರ್ಷದ ಅದೇ ತಿಂಗಳಲ್ಲಿ 8,683 ಯುನಿಟ್ ಮಾರಾಟಮಾಡಿತ್ತು. ಇದು ಹಿಂದಿನ ವರ್ಷದ ಮಾರಾಟಕ್ಕಿಂತ ಶೇ.66 ಹೆಚ್ಚಾಗಿದೆ.
ಒಟ್ಟು ಮಾರುಕಟ್ಟೆಯಲ್ಲಿ ಶೇ.13.2ರಷ್ಟು ಪಾಲು ಹೊಂದಿರುವ ನೆಕ್ಸಾನ್ ಟಾಟಾ ಮೋಟಾರ್ಸ್‌ಗೆ ಹೆಚ್ಚು ಮಾರಾಟವಾಗುವ ಮಾದರಿಯಾಗಿದೆ ಮತ್ತು ಬ್ರ್ಯಾಂಡ್ ನೀಡುವ ಅತ್ಯಂತ ಜನಪ್ರಿಯ ಎಸ್ ಯು ವಿ ಎನಿಸಿಕೊಂಡಿದೆ.