ಟಾಟಾ ನೆಕ್ಸಾನ್ ಭಾರತದ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗಿ ಹೊಸ ದಾಖಲೆ ಬರೆದಿದೆ. ಹಳೆ ದಾಖಲೆಗಳನ್ನು ಮುರಿಯುತ್ತಾ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಹೀಗಿರುವಾಗ ಟಾಟಾ ಮೋಟಾರ್ಸ್ ಟಾಟಾ ನೆಕ್ಸಾನ್ ವಿಭಾಗಕಕ್ಕೆ ಹೊಸ 4 ವೇರಿಯೆಂಟ್ ಕಾರು ಸೇರಿಸಿದೆ.
ಟಾಟಾ ನೆಕ್ಸಾನ್ XZ+ (P) / XZA+ (P) ಹಾಗೂ XZ+ (HS) / XZA+ (HS) ಎಂಬ 4 ವೇರಿಯೆಂಟ್ ಕಾರು ಇದೀಗ ನೆಕ್ಸಾನ್ ವಿಭಾಗಕ್ಕೆ ಹೆಚ್ಚುವರಿಯಾಗಿ ಸೇರಿಕೊಂಡಿದೆ. ಅದರ ಜೊತೆಗೆ ರಾಯಲ್ ಬ್ಲೂ ಬಣ್ಣದಲ್ಲಿ ಇದೀಗ ನೆಕ್ಸಾನ್ ಕಾರು ಲಭ್ಯವಿದೆ. ಇಂದಿನಿಂದಲೇ ನೂತನ ವೇರಿಯೆಂಟ್ ಕಾರಿನ ಬುಕಿಂಗ್ ಕೂಡ ಆರಂಭಗೊಂಡಿದೆ.
ಉಕ್ರೇನ್ ನಲ್ಲಿ ಹಾವೇರಿ ನವೀನ್ ಸಾವು, ಮತ್ತೊಬ್ಬರಿಗೆ ಗಾಯ; ಸಿಎಂ ಬೊಮ್ಮಾಯಿ ಭಾವುಕ
ನೂತನ ವೇರಿಯೆಂಟ್ ಕಾರು ಪೆಟ್ರೋಲ್ ಹಾಗೂ ಡೀಸಲ್ ಎಂಜಿನ್ ರೂಪದಲ್ಲಿ ಲಭ್ಯವಿದೆ. ನೂತನ ವೇರಿಯೆಂಟ್ ಕಾರಿನ ಬೆಲೆ 11.58 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದ್ದು, ಟಾಪ್ ಮಾಡೆಲ್ ಬೆಲೆ 12.23 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ).