ಭಾರತದ ಅತ್ಯಂತ ಸುರಕ್ಷಿತ ಕಾರುಗಳ ಉತ್ಪಾದನೆ ಮಾಡುವ ವಿಚಾರವಾಗಿ ಖ್ಯಾತಿ ಪಡೆದಿರುವ ಟಾಟಾ ಮೋಟರ್ಸ್‌ನ ಟಾಟಾ ಹ್ಯಾರಿಯರ್ ಮತ್ತು ಟಾಟಾ ಪಂಚ್‌ಗಳಂಥ ಕಾರುಗಳ ಮೂಲಕ ಈ ವಿಚಾರವಾಗಿ ತನ್ನ ಪ್ರತಿಷ್ಠೆಯನ್ನು ಬೇರೊಂದು ಮಟ್ಟಕ್ಕೆ ಕೊಂಡೊಯ್ದಿದೆ.
ಈ ಎಲ್ಲಾ ಕಾರುಗಳು ಸುರಕ್ಷತೆ ವಿಚಾರವಾಗಿ ಜಾಗತಿಕ ಮಟ್ಟದ ಎನ್‌ಕ್ಯಾಪ್ ರೇಟಿಂಗ್ಸ್‌ನಲ್ಲಿ ಅತ್ಯುತ್ತಮ ಸ್ಕೋರ್ ಪಡೆದಿವೆ. ಇತ್ತೀಚೆಗೆ ನಡೆದ ಘಟನೆಯೊಂದು ಈ ವಿಚಾರವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಹಿಮಾಚಲ ಪ್ರದೇಶದಲ್ಲಿ ಜರುಗಿದ ಈ ಘಟನೆಯಲ್ಲಿ, ಹಿಮಪಾತದ ಸಂತ್ರಸ್ತನಾದ ಟಾಟಾ ನೆಕ್ಸಾನ್ ಕಣಿವೆಯೊಂದಕ್ಕೆ ಬಿದ್ದಿದೆ. ವರದಿಗಳ ಪ್ರಕಾರ, 200 ಅಡಿಯಷ್ಟು ಆಳಕ್ಕೆ ಬಿದ್ದ ಕಾರು ಅನೇಕ ಸುತ್ತು ಉರುಳಿ ಬಿದ್ದು ಪೊದೆಗಳ ಒಳಗೆ ಹೋಗಿ ಬಿದ್ದಿದೆ.
ನಿಖಿಲ್ ರಾಣಾ ಎಂಬ ಯೂಟ್ಯೂಬರ್ ಈ ವಿಡಿಯೋ ಶೇರ್ ಮಾಡಿದ್ದಾರೆ. ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಜೀವಾಪಾಯದಿಂದ ಪಾರಾಗಿದ್ದು, ಒಂದೇ ಒಂದು ತರಚಿದ ಗಾಯವೂ ಇಲ್ಲದೇ ಸುರಕ್ಷಿತವಾಗಿ ಹೊರಬಂದಿದ್ದಾರೆ. ಕ್ರೇನ್ ಒಂದರ ಸಹಾಯದಿಂದ ಕಾರನ್ನು ಮೇಲೆತ್ತಲಾಗಿದೆ.
ಕಾರಿಗೂ ಸಹ ದೊಡ್ಡ ಮಟ್ಟದಲ್ಲಿ ಡ್ಯಾಮೇಜ್ ಆಗಿಲ್ಲ ಹಾಗೂ ಅದರ ಫ್ರೇಂ ಹಾಗೆಯೇ ಉಳಿದಿದೆ.